ಮಂಗಳೂರು, ಜೂ 24(Daijiworld News/MSP): ರಾಜ್ಯದಲ್ಲಿ ನಾಳೆಯಿಂದ (ಜೂ.೨೫) ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪೂರ್ವ ತಯಾರಿಗಳು ನಡೆದಿದ್ದು ಶಾಸಕ ವೇದವ್ಯಾಸ್ ಕಾಮತ್ ಪೂರ್ವ ಸಿದ್ಧತಾ ಕ್ರಮಗಳ ಪರಿಶೀಲನೆಗೆ ಸರಕಾರಿ ಶಾಲೆಗಳಿಗೆ ಇಂದು ಭೇಟಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 90 ಕೇಂದ್ರಗಳಲ್ಲಿ 30,835 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದಕ್ಕೆ ಪೂರಕವಾಗಿ 1,585 ಕೊಠಡಿಗಳಲ್ಲಿ ತಲಾ 20 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಜ್ಜುಗೊಳಿಸಲಾಗಿದೆ. ಜೊತೆಗೆ 102 ವಿಶ್ರಾಂತಿ ಕೊಠಡಿಗಳು,19 ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ