ಕಾಸರಗೋಡು, ಜೂ 24(DaijiworldNews/PY) : ಶುಕ್ರವಾರದ ನಮಾಜಿಗೆ ಸಾಮಾಜಿಕ ಅಂತರ ಹಾಗೂ ಆರೋಗ್ಯ ಇಲಾಖೆಯ ನಿಬಂಧನೆ ಪಾಲಿಸಿ ಕನಿಷ್ಠ 100 ಮಂದಿಗೆ ಪಾಲ್ಗೊಳ್ಳ ಬಹುದು . ಉಳಿದ ಸಮಯಗಳಲ್ಲಿ ನಮಾಜಿಗೆ 50 ಮಂದಿಗೆ ಅವಕಾಶ ನೀಡಲು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೊರೋನ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ .ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ . ಡಿ ಸಜಿತ್ ಬಾಬು ತಿಳಿಸಿದ್ದಾರೆ.
ಪ್ರಸ್ತುತ ಮಂಜೇಶ್ವರ ತನಕ ಸಂಚರಿಸುವ ಎಲ್ಲಾ ಬಸ್ಸುಗಳು ನಾಳೆ ಯಿಂದ ತಲಪಾಡಿ ತನಕ ಸಂಚಾರ ನಡೆಸಲು ತೀರ್ಮಾನಿಸಲಾಗಿದೆ. ತಲಪಾಡಿ ಚೆಕ್ ಪೋಸ್ಟ್ ತನಕ ಬಸ್ಸುಗಳು ಸಂಚರಿಸಲಿದೆ . ಮರಳುವ ಬಸ್ಸುಗಳು ತಲಪಾಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಸಜ್ಜುಗೊಳಿಸಿದ ಆರೋಗ್ಯ ತಪಾಸಣಾ ಕೇಂದ್ರ ದಿಂದ ಪ್ರಯಾಣ ಬೆಳೆಸಲಿದೆ. ಪ್ರಯಾಣಿಕರು ಈ ಆರೋಗ್ಯ ಕೇಂದ್ರದಲ್ಲಿ ಕಡ್ಡಾಯವಾಗಿ ತಪಾಸಣೆ ಗೊಳಗಾಗಬೇಕು .