ಕಾಸರಗೋಡು, ಜೂ. 25 (DaijiworldNews/MB) : ಕ್ವಾರಂಟೈನ್ನಲ್ಲಿರುವವರು ಹೊರ ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಕ್ವಾರಂಟೈನ್ ಮಾನದಂಡ ಪಾಲಿಸದವರ ವಿರುದ್ಧ ಕೇರಳ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಂತೆ ಎರಡು ವರ್ಷ ಕಠಿಣ ಸಜೆ ಲಭಿಸಲಿದೆ.
ಈಗಾಗಲೇ ಜಿಲ್ಲೆಯಲ್ಲಿ ಒಂಭತ್ತು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇವರನ್ನು ಸರಕಾರದ ನಿಯಂತ್ರಣದಲ್ಲಿರುವ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಉಲ್ಲಂಘನೆ ನಡೆಸುವವರ ಬಗ್ಗೆ ನಿಗಾ ವಹಿಸಲಾಗುತ್ತಿದೆ
ವಿವಾಹ, ವೈದ್ಯಕೀಯ ಅಗತ್ಯಗಳಿಗೆ ಇತರೆಡೆಗಳಿಂದ ಜಿಲ್ಲೆಗೆ ಆಗಮಿಸುವವರು ಕೋವಿಡ್ 19 ಜಾಗ್ರತಾ ವೆಬ್ ಸೈಟ್ ನಲ್ಲಿ ಶಾರ್ಟ್ ಟೈಂ ವಿಸ್ಟ್ ಎಂಬ ಲಿಂಕ್ ನಲ್ಲಿ ನೋಂದಣಿ ನಡೆಸಿ ಪಾಸ್ ಪಡೆದು ಆಗಮಿಸಬಹುದು. ಮಂಗಳೂರಿನ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆಯಲು ಕೋವಿಡ್ 19 ಜಾಗ್ರತಾ ವೆಬ್ ಪೋರ್ಟಲ್ ನಲ್ಲಿ ಶಾರ್ಟ್ ಟೈಂ ವಿಸಿಟ್ ಎಂಬ ಲಿಂಕ್ ನಲ್ಲಿ ನೋಂದಣಿ ಮಾಡಬೇಕು. ನೋಂದಣಿ ನಡೆಸುವ ವೇಳೆ ಚಿಕಿತ್ಸೆ ಪಡೆಯುವ ಆಸ್ಪತ್ರೆಯ ವಿಳಾಸ ಫ್ರಂ(from) ಎಂಬ ಕಾಲಂನಲ್ಲೂ, ರೋಗಿಯ ಮನೆಯ ವಿಳಾಸ ಟು (to) ಎಂಬ ಕಾಲಂ ನಲ್ಲೂ ದಾಖಲಿಸಬೇಕು.