ಮಂಗಳೂರು ಏ.5 : ಸುರತ್ಕಲ್ ನ ಕಾಟಿಪಳ್ಳದ ಬಳಿ ಕೊಲೆಯಾದ ದೀಪಕ್ ರಾವ್ ಪ್ರಕರಣದಲ್ಲಿ 13 ಮಂದಿಯ ಆರೋಪಿಗಳ ವಿರುದ್ದ ಎಸಿಪಿ ಮಂಜುನಾಥ್ ಶೆಟ್ಟಿ ನೇತೃತ್ವದ ತನಿಖಾ ತಂಡ ನಗರದ ಜೆಎಂಎಫ್ ನ್ಯಾಯಲಯಕ್ಕೆ ಶನಿವಾರ 500 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ.
ಪ್ರಕರಣದ ಆರೋಪಿಗಳಾದ ಕೃಷ್ಣಪುರ ಕಾಟಿಪಳ್ಳದ ಮೊಹಮ್ಮದ್ ನವಾಝ್ ಅಲಿಯಾಸ್ ಪಿಂಕಿ ನವಾಝ್, ರಿಜ್ವಾನ್ ಅಲಿಯಾಸ್ ಇಜ್ಜು ಅಲಿಯಾಸ್ ರಿಜ್ಜು, ಮುಹಮ್ಮದ್ ನೌಷದ್, ಮುಹಮ್ಮದ್ ಇರ್ಷಾನ್, ಅಬ್ದುಲ್ ಅಝೀಜ್, ಅಬ್ದುಲ್ ಅಝೀಮ್ , ಚೊಕ್ಕ ಬೆಟ್ಟು ನಿವಾಸಿ ಮುಹಮ್ಮದ್ ರಫೀಕ್ ಅಲಿಯಾಸ್ ಮಾಂಗೋ ರಫೀಕ್,ಇರ್ಫಾನ್,ಕಾಟಿಪಳ್ಳದ ಮುಹಮ್ಮದ್ ಅನಾಸ್ ಅಲಿಯಾಸ್ ಅಂಚು, ಮುಹಮ್ಮದ್ ಝಾಹೀದ್ ಅಲಿಯಾಸ್ ಜಾಹೀ,ಹಿದಾಯತುಲ್ಲಾ,ಚೊಕ್ಕಬೆಟ್ಟು ನಿವಾಸಿ ಇಮ್ರಾನ್ ಮತ್ತು ಕಾಟಿಪಳ್ಳದ ಸಫ್ವಾನ್ ಎಂಬವರು ದೀಪಕ್ ರಾವ್ ಕೊಲೆಯಲ್ಲಿ ಭಾಗಿಯಾಗಿರುವ ಅರೋಪ ಪಟಿಯಲ್ಲ್ಟಿ ಉಲ್ಲೇಖಿಸಲಾಗಿದೆ.
ದೀಪಕ್ ರಾವ್ ಬಂಟಿಂಗ್ ಗಲಾಟೆ ಸಂದರ್ಭ ಅಲ್ಲಿದ್ದು ದೀಪಕ್ ರಾವ್ ಹಾಗೂ ಮುಸ್ಲಿಂ ಗುಂಪಿನ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ಹೋದ ಪರಿಣಾಮ ಹಾಗೂ ದೀಪಕ್ ಬಜರಂಗ ದಳದ ಕಾರ್ಯಕರ್ತನಾಗಿದ್ದನಲ್ಲದೇ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರಿಂದ ಹಾಗೂ ಈ ಹಿಂದೆ ಹಿಂದೂಗಳ ಗುಂಪು ಮತ್ತು ಮುಸ್ಲಿಂ ಗುಂಪಿನ ನಡುವೆ ವೈರತ್ವ ಇತ್ತು, ಆ ಕಾರಣ ಹತ್ಯೆ ಮಾಡಲಾಯಿತು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂಬ ಅಂಶವನ್ನು ಆರೋಪ ಪಟ್ಟಿ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಸಫ್ವಾನ್ ತಲೆ ಮರೆಸಿಕೊಂಡಿದ್ದಾರೆ.ಇತರರು ನ್ಯಾಯಂಗ ಬಂಧನದಲ್ಲಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಬಳಿಕ ಹೆಚ್ಚಿಸಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.