ಬೆಳ್ತಂಗಡಿ , ಜೂ 26 (Daijiworld News/MSP): ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ದಿಡುಪೆ, ನಾವೂರು, ನಡ ಗ್ರಾಮಗಳ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಮಳೆಗಾಲದ ಮುನ್ನೆಚ್ಚರಿಕೆಯ ಕ್ರಮವಾಗಿ ನಕ್ಸಲ್ ನಿಗ್ರಹ ಪಡೆಯ ನೇತೃತ್ವದಲ್ಲಿ ಗುರುವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ನಕ್ಸಲ್ ಚಟುವಟಿಕೆ ಬಗ್ಗೆ ಏನಾದರು ಕುರುಹುಗಳಿವೆಯೇ ಎಂಬುದರ ಬಗ್ಗೆ ನಕ್ಸಲ್ ನಿಗ್ರಹ ಪಡೆಯಿಂದ ಶೋಧ ಕಾರ್ಯ ನಡೆದಿದೆ. ಈ ಪ್ರದೇಶದಲ್ಲಿ ಕಳೆದ ಮಳೆಗಾಲದಲ್ಲಿ ಭಾರಿ ಭೂಕುಸಿತ ಹಾಗೂ ಪ್ರವಾಹ ಸಂಭವಿಸಿದಾಗಲೂ ನಕ್ಸಲ್ ನಿಗ್ರಹ ಪಡೆಯವರೇ ಅರಣ್ಯದೊಳಗಿನ ಜನರ ನೆರವಿಗೆ ಬಂದಿದ್ದರು. ಇದೀಗ ಮತ್ತೆ ಪ್ರವಾಹದ ಭಯವಿರುವ ಹಿನ್ನಲೆಯಲ್ಲಿ ಈ ಪ್ರದೇಶಗಳ ಪರಿಶೀಲನೆಯನ್ನೂ ನಡೆಸಲಾಗಿರುವುದಾಗಿ ತಿಳಿದುಬಂದಿದೆ. ಸುಮಾರು ಹತ್ತುಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.