ಉಡುಪಿ, ಜೂ 26 (Daijiworld News/MSP): ಸುಮಾರು ನಾಲ್ಕು ವರ್ಷಗಳ ಹಿಂದೆ ಕರಾವಳಿ ಭಾಗದಲ್ಲಿ ಸಂಚಲನ ಉಂಟು ಮಾಡಿದ್ದ ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಿರಂಜನ್ ಭಟ್ ಗೆ ತಾತ್ಕಾಲಿಕ ಜಾಮೀನು ದೊರೆತ ಹಿನ್ನಲೆಯಲ್ಲಿ ಗುರುವಾರ ನಂದಳಿಕೆ ಆಗಮಿಸಿ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾನೆ.
ಜೂ. 22ರಂದು ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಅವರು ಅನಾರೋಗ್ಯ ಕಾರಣ ಮೃತಪಟ್ಟಿದ್ದು ತಂದೆಯ ಅಂತಿಮ ಕಾರ್ಯಕ್ಕಾಗಿ ಷರತ್ತುಬದ್ಧ ತಾತ್ಕಾಲಿಕ ಜಾಮೀನಿನ ಪಡೆದಿದ್ದ. ಕುಟುಂಬದ ಸದಸ್ಯರು, ಬಂಧುಗಳ ಉಪಸ್ಥಿತಿಯಲ್ಲಿ ನಡೆಯಿತು. ವಿವಿಧ ವೈದಿಕ ಪ್ರಕ್ರಿಯೆಗಳು ನಂದಳಿಕೆ ಮನೆಯಲ್ಲಿ ನಡೆದರೆ ಶವಸಂಸ್ಕಾರ ಕಾರ್ಕಳದ ಬ್ರಾಹ್ಮಣ ಸಭಾದ ಸಶ್ಮಾನದಲ್ಲಿ ನಡೆಯಿತು.
ಈ ವೇಳೆ ಭಾಸ್ಕರ ಶೆಟ್ಟಿ ಪ್ರಕರಣದ ಆರೋಪಿಗಳಲ್ಲಿ ಓರ್ವಳಾದ ರಾಜೇಶ್ವರಿ ಶೆಟ್ಟಿಯೂ ಉಪಸ್ಥಿತಿ ಇದ್ದು ಬಹಿರಂಗವಾಗಿ ಕಾಣಿಸಿಕೊಳ್ಳದೆ ಕಪ್ಪು ಗಾಜು ಹೊಂದಿದ ಕಾರಿನಲ್ಲಿದ್ದು ಇಬ್ಬರು ಅಂಗರಕ್ಷಕರು ಕೂಡಾ ಮನೆ ಹೊರಭಾಗದ ಬಸ್ ನಿಲ್ದಾಣದಲ್ಲಿ ನಿಂತಿದ್ದರು.