ಮೂಡುಬಿದಿರೆ, ಏ 05 : ಕಾಂಗ್ರೆಸ್ಗೆ ಹಾಕುವ ಪ್ರತಿಯೊಂದು ಮತ ಒಬ್ಬೊಬ್ಬ ಭಯೋತ್ಪಾದಕನನ್ನು ಸೃಷ್ಟಿಸುತ್ತದೆ. ಕಾಂಗ್ರೆಸ್ ಶಾಸಕ ಬಂದರೆ ಮೂಡುಬಿದಿರೆ ಪೇಟೆ ಜಿಹಾದಿಗಳ ಕೈಗೆ ಹೋಗುತ್ತದೆ. ಸಮಾಜದಲ್ಲಿ ಭಯವನ್ನು ನಿರ್ಮಿಸಿ ಜನರನ್ನು ಭಯಭೀತರಾಗಿಸಿರುವ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಮತಕ್ಕಾಗಿ ಜಿಹಾದಿ ಮತ್ತು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಆರೋಪಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಯ ವಾಣಿಜ್ಯ ವ್ಯವಹಾರದಲ್ಲಿ ಜಿಹಾದಿಗಳು ಪ್ರಾಬಲ್ಯ ಮೆರೆಯುತ್ತಿದ್ದು ಅದರಲ್ಲಿ ಇಲ್ಲಿ ನಿರ್ಮಾಣವಾಗುತ್ತಿರುವ ಮಾರ್ಕೆಟ್ನ ಗುತ್ತಿಗೆಯಲ್ಲಿ ಜಿಹಾದಿಗಳ ಕೈವಾಡವಿದೆ. ಇವರ ಜೊತೆ ಶಾಸಕ ಅಭಯಚಂದ್ರ ಜೈನ್ ಇದ್ದಾರೆ. ಮೂಡುಬಿದಿರೆಯು ಕೇರಳ ಮತ್ತು ಕಾಶ್ಮೀರ ಆಗದಂತೆ ಹೋರಾಟವನ್ನು ಮುಂದುವರೆಸಲಾಗುವುದು ಎಂದರು.
ಮೂಡುಬಿದಿರೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಗಮನ ಕೊಡದ ಶಾಸಕ ಅಭಯಚಂದ್ರ ಜೈನ್ ಅವರು ಹಿಂದುಳಿದ ವರ್ಗದವರ ಬಗ್ಗೆ ನಯಾಪೈಸೆಯ ಏಳಿಗೆಯನ್ನು ಮಾಡಿಲ್ಲ. ಪ್ರಶಾಂತ್ ಪೂಜಾರಿ ಕೊಲೆ ನಡೆದಾಗ ಅವರ ಮನೆಗೆ ಆ ಸಂದರ್ಭವೂ ತೆರಳಿಲ್ಲ ಮತ್ತೆಯೂ ಹೋಗಿಲ್ಲ ಎಂದ ಅವರು ಕಾಂಗ್ರೆಸ್ ಗೆದ್ದರೆ ಜಿಲ್ಲೆ ಜಿಹಾದಿಗಳ ಕೈಗೆ ಹೋಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ನ್ನು ಜಿಲ್ಲೆ, ರಾಜ್ಯದಿಂದ ಕಿತ್ತೊಗೆದು ಭಯ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮತ್ತು ಧರ್ಮವೇ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಒಬಿಸಿ ಮೋರ್ಚಾದ ಮೂಡುಬಿದಿರೆ ಮಂಡಲದ ಅಧ್ಯಕ್ಷ ಗೋಪಾಲ ಶೆಟ್ಟಿಗಾರ್ ಮಾತನಾಡಿ ಮೂಡುಬಿದಿರೆಯಲ್ಲಿ 20 ವರ್ಷಗಳಿಂದ ಶಾಸಕರಾಗಿರುವ ಅಭಯಚಂದ್ರ ಜೈನ್ ಅವರಿಂದ ಯಾವುದೇ ದೊಡ್ಡ ಸಾಧನೆಗಳು ಆಗಿಲ್ಲ. ಒಳಚರಂಡಿಯಿಲ್ಲ, ಹಿಂದುಳಿದ ವರ್ಗಗಳ ಹಾಸ್ಟೆಲ್ಗಳು ಸರಿಯಾಗಿಲ್ಲ. ಕಲ್ಯಾಣ ಭವನ ನಿರ್ಮಿಸುವ ಪ್ರಯತ್ನಗಳ ಆಗಿಲ್ಲ ಎಂದ ಅವರು ಇದನ್ನೆಲ್ಲಾ ಸರಿಪಡಿಸಲು ಈ ಚುನಾವಣೆಯು ಉತ್ತರವಾಗಲಿದೆಯೆಂದು ತಿಳಿಸಿದರು.
ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸಂದೇಶ್ ಪೂಜಾರಿ. ಮೂಡುಬಿದಿರೆ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಜಿ.ಮೂಡುಶೆಡ್ಡೆ, , ಮಂಡಲ ಕಾರ್ಯದರ್ಶಿ ರಾಜೇಶ್ ಅಮೀನ್, ಉಪಾಧ್ಯಕ್ಷ ಕಿಶೋರ್ ದೇವಾಡಿಗ, ಜಗದೀಶ ಕೋಟ್ಯಾನ್, ವಿಜಯ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.