ಕಾಸರಗೋಡು, ಜೂ 26 (DaijiworldNews/SM): ಕೊರೋನಾ ಮುಕ್ತಗೊಂಡಿದ್ದ ಆಟೋ ಚಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಕೋಡೋ ಬೇಳೂರಿನಲ್ಲಿ ನಡೆದಿದೆ.
ಹಲಸಿನಕಾಯಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 44 ವರ್ಷದ ವ್ಯಕ್ತಿ ಮೃತಪಟ್ಟವರು. ಮೇ 19ರಂದು ಮನೆ ಹಿತ್ತಲಿನಲ್ಲಿ ಹಲಸಿನ ಕಾಯಿ ಕೊಯ್ಯುತ್ತಿದ್ದಾಗ ಹಲಸಿನಕಾಯಿಯೊಂದು ರೋಬಿನ್ ದೇಹದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಲೆಗೆ ಗಂಭೀರ ಗಾಯವಾಗಿತ್ತು. ಬೆನ್ನುಮೂಳೆ ಮುರಿದಿತ್ತು.
ಗಂಭೀರ ಗಾಯಗೊಂಡಿದ್ದ ರೋಬಿನ್ ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಕ್ರಿಯೆ ನಡೆಸುವ ಮೊದಲು ತಪಾಸಣೆ ನಡೆಸಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಇದರಿಂದ ಶಸ್ತ್ರಕ್ರಿಯೆ ನಡೆದಿರಲಿಲ್ಲ.
ಐದು ದಿನಗಳ ಬಳಿಕ ಕೊರೋನ ಮುಕ್ತಗೊಂಡರೂ ಶಸ್ತ್ರಕ್ರಿಯೆ ನಡೆದಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಬಿನ್ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.