ಕುಂದಾಪುರ, ಜೂ 27 (Daijiworld News/MSP): ಸೈಕಲ್ ಗೆ ಟಿಪ್ಪರ್ ಢಿಕ್ಕಿಯಾದ ಪರಿಣಾಮ ಬಾಲಕ ಸಾವಿಗೀಡಾದ ಘಟನೆ ಜೂ.26 ರ ಶುಕ್ರವಾರ ಮಧ್ಯಾಹ್ನ ಬೇಳೂರು ಗ್ರಾಂ.ಪಂ ವ್ಯಾಪ್ತಿಯ ಕಲ್ಮಂಡಿಯಲ್ಲಿ ನಡೆದಿದೆ.
ಮೃತ ಬಾಲಕನ್ನು ಬೇಳೂರು ಕಲ್ಮಂಡಿ ಗಣೇಶ್ ಅವರ ಪುತ್ರ ಮಂಜುನಾಥ್ (9) ಎಂದು ಗುರುತಿಸಲಾಗಿದೆ.
ಮೊಗೆಬೆಟ್ಟು ಕಲ್ಮಂಡಿ ಜಕ್ಷನ್ ನಿಂದ ಕರಣಿ ಕಡೆಗೆ ಬಾಲಕ ಸೈಕಲ್ ನಲ್ಲಿ ತೆರಳುತ್ತಿದ್ದ ಸಂದರ್ಭ ಅತೀ ವೇಗದಿಂದ ಬಂದ ಟಿಪ್ಪರ್ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ತತ್ ಕ್ಷಣವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತದರೂ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಟಿಪ್ಪರ್ ಚಾಲಕ ಬೋಜ ಪೂಜಾರಿ ಎಂದು ಗುರುತಿಸಲಾಗಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಮಂಜುನಾಥ್ ಸ್ಥಳೀಯ ನೂಜಿ ಸ.ಪ್ರಾ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿಯಾಗಿದ್ದು, ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ.