ಬೆಳ್ತಂಗಡಿ, ಜೂ 27 (DaijiworldNews/SM): ಓಟಿಪಿ ನಂಬರ್ ಪಡೆದು ಹಣ ಮಹಿಳೆಯೊಬ್ಬಳನ್ನು ವಂಚಿಸಿರುವ ಘಟನೆ ವೇಣೂರು ಸನಿಹದ ಆರಂಬೋಡಿ ಎಂಬಲ್ಲಿ ನಡೆದಿದೆ.
ಆರಂಬೋಡಿಯ ಇಂದಿರಾ ಪೂಜಾರ್ತಿ ಬುವರೇ ವಂಚನೆಗೊಳಗಾದವರು. ಇವರು ತಮ್ಮ ಖಾತೆಯಿಂದ 10 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇವರ ಪುತ್ರನ ಮೊಬೈಲ್ಗೆ +91 8544743846 ಈ ನಂಬರಿನಿಂದ ಕರೆ ಮಾಡಿರುವ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ. ಹಾಗೂ ಬ್ಯಾಂಕ್ ಮೆನೇಜರ್ ಎಂದು ನಂಬಿಸಿ ಖಾತೆಯಿಂದ ಸಾಲದ ಹಣವನ್ನು ತೆಗೆಯಲಿದೆ. ಮೊಬೈಲ್ಗೆ ಬಂದಿರುವ ಓಟಿಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳಿ ಹಣವನ್ನು ಲಪಟಾಯಿಸಲಾಗಿದೆ ಎಂದು ತಿಳಿದುಬಂದಿದೆ.
ವಂಚಕರು ಹೀಗೆ ಎರಡು ಬಾರಿ ಹಣವನ್ನು ಲಪಟಾಯಿಸಿದ್ದಾರೆ. ಬ್ಯಾಂಕ್ ಸಾಲದ ಬಗ್ಗೆ ಬ್ಯಾಂಕ್ನಲ್ಲಿ ವಿಚಾರಿಸಿದಾಗ ಖಾತೆಗೆ ಕನ್ನ ಹಾಕಿರುವ ವಿಷಯ ಬೆಳಕಿಗೆ ಬಂದಿದ್ದು, ಹಣ ಕಳೆದುಕೊಂಡಿರುವ ಇಂದಿರಾ ಅವರ ಕುಟುಂಬ ತೀರಾ ಬಡತನದ್ದಾಗಿದ್ದು, ಶನಿವಾರ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಓಟಿಪಿ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಎಟಿಎಂ ಸಂಖ್ಯೆಯನ್ನು ದೂರವಾಣಿ ಕರೆಯಲ್ಲಿ ಯಾರಿಗೂ ತಿಳಿಸದಂತೆ ಬ್ಯಾಂಕ್ಗಳು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಮೋಸ ಹೋಗುವವರ ಸಂಖ್ಯೆಯೂ ಕೂಡ ಅದೇ ರೀತಿಯಲ್ಲಿದೆ ಎಂಬುವುದೇ ಖೇದಕರ.