ಉಡುಪಿ, ಜೂ 28(DaijiworldNews/PY) : ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮಣಿಯೂರಿನ ಎಳ್ಳೂರಿನ ನಿವಾಸಿ ಅರ್ನಾಲ್ಡ್ ಡಿ’ಸೋಜಾ (29) ಎಂದು ತಿಳಿದುಬಂದಿದೆ.
ಅನಾರ್ಲ್ಡ್ ಅವರು ಸುಮಾರು ಒಂದು ವರ್ಷದ ಹಿಂದೆ ಗಲ್ಫ್ನಿಂದ ಹಿಂದಿರುಗಿದ್ದು, ಕಾಪುವಿನ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಲಾಕ್ಡೌನ್ ಹಿನ್ನೆಲೆ ಅವರು ತಮ್ಮ ಪಕ್ಕದ ಮನೆಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.
ಜೂನ್ 26ರಂದು ರಾತ್ರಿ 9.30ಕ್ಕೆ ಊಟದ ನಂತರ ತಮ್ಮ ಕೊಠಡಿಗೆ ಹೋದವರು ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.