ಮೂಡಬಿದ್ರೆ, ಏ 6: ಮುಲ್ಕಿ- ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯಲ್ಲಿ ಐವನ್ ಡಿಸೋಜಾಗೆ ಟಿಕೆಟ್ ನೀಡಬೇಕೆಂದು ಕ್ರೈಸ್ತ ಸಮುದಾಯ ಒತ್ತಾಯಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಟಿಕೆಟ್ಗಾಗಿ ಐವನ್ ಪರವಾಗಿ ಕ್ರೈಸ್ತ ಸಮುದಾಯ ಬೃಹತ್ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸುತ್ತಿದೆ. ಮಾತ್ರವಲ್ಲ ಈ ಪ್ರತಿಭಟನೆ ಮೂಡಬಿದಿರೆ ಅಥವಾ ಮಂಗಳೂರಿನ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ಕಾಂಗ್ರೆಸ್ ಮೂಲಗಳೇ ತಿಳಿಸಿವೆ.
ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದ ಮಖಂಡರು ಸೇರಿದಂತೆ ಮಂಗಳೂರಿನ ಉದ್ಯಮಿ ಹಾಗೂ ಕ್ರೈಸ್ತ ಸಮುದಾಯದ ಪ್ರಮುಖ ಮುಂಖಂಡರೊಬ್ಬರು ಟಿಕೆಟ್ ಗಾಗಿ ಐವನ್ ಪರ ನಿಂತಿದ್ದಾರೆ ಎಂದು ಹೇಳಾಗಿದೆ. ಇದೀಗ ಕ್ರೈಸ್ತ ಧರ್ಮಗುರುಗಳು, ಮುಖಂಡರು ಸೇರಿದಂತೆ ಹಲವರು ಐವನ್ ಅವರನ್ನೇ ಕಾಂಗ್ರೆಸ್ ಆಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.
ಈ ವಿಚಾರವಾಗಿ ಈಗಾಗಲೇ ಹಲವು ಸುತ್ತಿನ ಚರ್ಚೆಗಳು ನಡೆದಿದ್ದು, ತನ್ನ ಶಕ್ತಿ ಪ್ರದರ್ಶನಕ್ಕೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಕ್ರೈಸ್ತ ಸಮುದಾಯ ಸಿದ್ಧತೆ ನಡೆಸಿದೆ. ಇದೇ ಬರುವ ಎಪ್ರಿಲ್ 10 ರಂದು ಐವನ್ ಡಿಸೋಜಾ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ರಸ್ತೆಗಿಳಿಯಲು ಕ್ರೈಸ್ತ ಸಮುದಾಯ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.