ಮಂಗಳೂರು, ಜೂ. 28 (DaijiworldNews/MB) : ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸುರತ್ಕಲ್ನ ಇಡ್ಯದ 31 ವರ್ಷದ ಯುವಕನ ಅಂತ್ಯಸಂಸ್ಕಾರಕ್ಕೆ ಬೋಳಾರದ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇದೀಗ ಅಧಿಕಾರಿಗಳು ಸ್ಥಳೀಯರ ಮನವೊಲಿಸಿ ಬೋಳಾರದ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸುರತ್ಕಲ್ನ ಇಡ್ಯದ 31 ವರ್ಷದ ಯುವಕನ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಭಾನುವಾರ ಮಧ್ಯಾಹ್ನ ಬೋಳಾರದಲ್ಲಿ ನಡೆದಿದ್ದು 3 ಗಂಟೆಗಳಿಂದ ಮೃತ ಸೋಂಕಿತ ಯುವಕನ ಶವ ಸಂಸ್ಕಾರಕ್ಕಾಗಿ ಸಿಬ್ಬಂದಿಗಳು ಅಲೆದಾಟ ನಡೆಸುತ್ತಿದ್ದರು.
ಇಡ್ಯಾ ಗ್ರಾಮದ 31 ವರ್ಷದ ಸೋಂಕಿತ ಮೃತಪಟ್ಟಿದ್ದು ಇಡ್ಯಾ ಮಸೀದಿ ಕಬರ್ ಗುಂಡಿಯಲ್ಲಿ ನೀರು ತುಂಬಿದ ಕಾರಣದಿಂದ ಬೋಳಾರ ಬಳಿಯ ಮಸೀದಿಯಲ್ಲಿ ಅಧಿಕಾರಿಗಳು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸುರತ್ಕಲ್ ಮಸೀದಿಯಲ್ಲೇ ದಫನ ಮಾಡುವಂತೆ ಒತ್ತಾಯ ಮಾಡಿದ್ದರು.
ಇದೀಗ ಅಧಿಕಾರಿಗಳು ಸ್ಥಳೀಯರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಬೋಳಾರ ಬಳಿಯ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಇನ್ನು ಸ್ಥಳೀಯರು ಇದೇ ಕೊನೆಯ ಬಾರಿ ಅವಕಾಶ ನೀಡಲಾಗುವುದು. ಇನ್ನು ಮುಂದೆ ಸ್ಥಳೀಯರು ಹೊರತುಪಡಿಸಿ ಬೇರೆ ಪ್ರದೇಶದವರ ಅಂತ್ಯ ಸಂಸ್ಕಾರವನ್ನು ಇಲ್ಲಿ ಮಾಡುವಂತಿಲ್ಲ ಎಂದು ಹೇಳಿದ್ದಾರೆ.