ಬೆಳ್ತಂಗಡಿ ಏ 06 : ಹೃದಯಾಘಾತಗೊಂಡ ಪತ್ನಿಯನ್ನು ಅಸ್ಪತ್ರೆಗೆ ಸಾಗಿಸುವ ಸಂದರ್ಭ, ಪತಿ ಹೃದಯಾಘಾತಕ್ಕೀಡಾಗಿ ಸಾವಿಗೀಡಾದ ಘಟನೆ ಏ 6 ರ ಶುಕ್ರವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಬಳಿಯ ಪಣೆಜಾಲು ಒಡಿನ್ನಾಳದಲ್ಲಿ ಈ ಘಟನೆ ನಡೆದಿದ್ದು, ಕರ್ನಂತೋಡಿ ನಿವಾಸಿ 65 ರ ಹರೆಯದ ಗೆಳೆಯ ಗೌಡ ಮೃತಪಟ್ಟವರು. ಪತ್ನಿ 55ರ ಹರೆಯದ ಪುಷ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.