ಮಂಗಳೂರು, ಜೂ. 28 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ಆತಂಕ ಹಿನ್ನೆಲೆಯಲ್ಲಿ ಪಾಲಿಕೆ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ಸೋಮವಾರದಿಂದ ಒಂದು ವಾರಗಳ ಕಾಲ ಪಾಲಿಕೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್ ತಿಳಿಸಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಸಾರ್ವಜನಿಕರು ಪಾಲಿಕೆಯತ್ತ ತೆರಳುವಂತಿಲ್ಲ.
ಪಾಲಿಕೆಯ ಹೊರ ಭಾಗದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗಿದೆ. ಹೆಲ್ಪ್ ಡೆಸ್ಕ್ ಗಳಲ್ಲಿ ಸಾರ್ವಜನಿಕರ ಅಹವಾಳು ಅಲಿಸುವುದಕ್ಕೆ ಅವಕಾಶ ಇರಲಿದೆ. ಅನಾವಶ್ಯಕವಾಗಿ ಯಾರೂ ಕೂಡ ಪಾಲಿಕೆಯತ್ತ ತೆರಳದಿರಿ. ತುರ್ತು ಕಾರ್ಯಗಳಿದ್ದಲ್ಲಿ ಮಾತ್ರ ಹೆಲ್ಪ್ ಡೆಸ್ಕ್ ಮೂಲಕ ಪಡೆದುಕೊಳ್ಳುವಂತೆ ಆದೇಶಿಸಲಾಗಿದೆ.