ಮಂಗಳೂರು, ಜೂ. 28 (DaijiworldNews/SM): ಮಂಗಳೂರು ನಗರದ ನಿರ್ಗಮಿತ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷಾ ಮಂಗಳೂರಿನ ಜನತೆಗೆ ತುಳುವಿನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ತನ್ನ ಟ್ವೀಟರ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ‘ಮಂಗಳೂರಿನ ಎಲ್ಲಾ ಪ್ರೀತಿಯ ಬಂಧುಗಳೇ, 11 ತಿಂಗಳ ಕಾಲ ಮಂಗಳೂರು ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ ಬಳಿಕ ಇದೀಗ ವರ್ಗಾವಣೆಯಾಗಿದೆ. ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ನನ್ನ ಕರ್ತವ್ಯ ಮಾಡಿಕೊಂಡು ಬಂದಿದ್ದೇನೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಹೃದಯ ಪೂರ್ವಕ ಅಭಿನಂದನೆ’ ಎಂಬುವುದಾಗಿ ತುಳುವಿನಲ್ಲಿ ಬರೆದು ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ತುಳುವಿನಲ್ಲಿ ಮಾಡಿರುವ ಟ್ವೀಟ್ ತುಳುನಾಡಿನ ಜನರ ಮನ ಗೆದ್ದಿದೆ.