ಕಾಸರಗೋಡು, ಜೂ. 29 (DaijiworldNews/MB) : ಜಿಲ್ಲೆಯಲ್ಲಿ ಭಾನುವಾರ ಆರು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಐವರು ಗುಣಮುಖರಾಗಿದ್ದಾರೆ.
ಐವರು ವಿದೇಶದಿಂದ ಹಾಗೂ ಓರ್ವ ಮಹಾರಾಷ್ಟ್ರದಿಂದ ಬಂದವರಾಗಿದ್ದು ಇಬ್ಬರು ಕಾರಡ್ಕ, ಉದುಮ, ಚೆಮ್ನಾಡ್, ಕಾಞಂಗಾಡ್, ಅಜನೂರು ಗ್ರಾಮಪಂಚಾಯತ್ ವ್ಯಾಪ್ತಿಯ ತಲಾ ಒಬ್ಬರಾಗಿದ್ದಾರೆ. ಹಾಗೆಯೇ ಮಧೂರು, ಮಂಗಲ್ಪಾಡಿ ತಲಾ ಇಬ್ಬರು ಕುಂಬಳೆಯ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 439 ಕ್ಕೆ ತಲುಪಿದ್ದು ಈ ಪೈಕಿ 124 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರನೇ ಹಂತದಲ್ಲಿ ಸೋಂಕಿತರ ಸಂಖ್ಯೆ 261 ಕ್ಕೆ ತಲುಪಿದೆ. ಮೊದಲ ಹಂತದಲ್ಲಿ ಒಂದು ಎರಡನೇ ಹಂತದಲ್ಲಿ 178 ಮಂದಿಗೆ ಸೋಂಕು ದೃಢಪಟ್ಟಿತ್ತು. ಆದರೆ ವಿದೇಶದಿಂದ ಹಾಗೂ ಹೊರರಾಜ್ಯದಿಂದ ಬಂದವರಲ್ಲಿ ಬಹುತೇಕ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸಂಪರ್ಕದಿಂದ ಸೋಂಕಿತರಾದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರವಾಗಿದು ಜಿಲ್ಲೆಗೆ ನೆಮ್ಮದಿ ನೀಡಿದೆ.