ಕಾಸರಗೋಡು, ಜೂ. 29 (DaijiworldNews/MB) : ಕೊರೊನಾ ಮಾನದಂಡ ಪಾಲಿಸದ ನಗರದ ಮೂರು ಹೋಟೆಲ್ ಸಮುಚ್ಛಯಗಳನ್ನು ಒಂದು ವಾರ ಕಾಲ ಬಂದ್ ಮಾಡಲು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಆದೇಶ ನೀಡಿದ್ದಾರೆ.
ಈ ಹೋಟೆಲ್ಗಳನ್ನು ಸೋಂಕು ಮುಕ್ತಗೊಳಿಸುವಂತೆ ಆದೇಶಿಸಿದ್ದಾರೆ. ಕೇರಳ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಂತೆ ಕ್ರಮ ತೆಗೆದುಕೊಳ್ಳಲಾಗಿದೆ.
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದು ಮಂಗಳೂರಿಗೆ ತೆರಳಬೇಕಾದ ಪ್ರಯಾಣಿಕರು ವಿಶ್ರಾಂತಿ ಪಡೆದ ಹಳೆ ಬಸ್ಸು ನಿಲ್ದಾಣದ ಎರಡು ಮತ್ತು ಹೊಸ ಬಸ್ಸು ನಿಲ್ದಾಣದ ಒಂದು ಹೋಟೆಲ್ನ್ನು ಏಳು ದಿನಗಳ ಕಾಲ ಬಂದ್ ಮಾಡುವಂತೆ ಆದೇಶ ನೀಡಲಾಗಿದೆ .
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ ಪ್ರಯಾಣಿಕರು ಈ ಹೋಟೆಲ್ಗಳಲ್ಲಿ ತಂಗಿದ್ದರು.