ಉಳ್ಳಾಲ, ಜೂ 29 (Daijiworld News/MSP): ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕಗೊಳ್ಳುತ್ತಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಸೋಂಕಿನ ಆರ್ಭಟ ಮತ್ತೆ ಮುಂದುವರಿದಿದೆ. ಈ ಮೊದಲು ಆರು ಮಂದಿಗೆ ಸೋಂಕು ದೃಢವಾಗಿದ್ದರೆ, ಸೋಮವಾರ ಮತ್ತೆ ಆರು ಜನರ ದೇಹಕ್ಕೆ ಕೋವಿಡ್ -19 ಸೋಂಕು ಲಗ್ಗೆಯಿಟ್ಟಿದೆ.
ಇಂದು ಠಾಣೆಯ ಓರ್ವ ಹೋಂ ಗಾರ್ಡ್ ಮತ್ತು ಐವರು ಪೊಲೀಸ್ ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢವಾಗಿತ್ತು.ಆದರೆ ಇವರನ್ನು ಇನ್ನು ಆಸ್ಪತ್ರೆಗೆ ದಾಖಲಿಸಲಾಗಲಿಲ್ಲ. ಬೆಳಗ್ಗೆ ಹತ್ತು ಗಂಟೆಯಿಂದ ಕ್ವಾಟ್ರಸ್ ಹಾಗೂ ಠಾಣೆಯ ಬಳಿ ಕೊರೊನಾ ಸೋಂಕಿತ ಪೊಲೀಸರು ಆರೋಗ್ಯ ಸಿಬ್ಬಂದಿಗಳಿಗಾಗಿ ಕಾಯುತ್ತಿದ್ದಾರೆ.
ಕೊರೊನಾ ದೃಢಪಟ್ಟರೂ ಸಂಜೆ ನಾಲ್ಕು ಗಂಟೆವರೆಗೆ ಆರೋಗ್ಯ ಸಿಬ್ಬಂದಿಗಳ ಸುಳಿವಿಲ್ಲ. ಪೊಲೀಸರಿಗೆ ಹೀಗಾದರೆ ಇನ್ನು ಜನಸಾಮಾನ್ಯರ ಗತಿ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಹಿಂದೆ ಠಾಣೆಯ ಎಸ್ ಐ, ಎಎಸ್ ಐ, ಇಬ್ಬರು ಡ್ರೈವರ್ ಗಳು ಮತ್ತು ಠಾಣೆಯಲ್ಲಿದ್ದ ಇಬ್ಬರು ಆರೋಪಿಗಳಿಗೆ ಸೋಂಕು ತಗುಲಿತ್ತು. ಇಂದು ಮತ್ತೆ ಆರು ಮಂದಿ ಆರಕ್ಷಕರು ಕೋವಿಡ್ ಸೋಂಕು ದೃಢವಾಗಿದೆ. ಸದ್ಯ ಠಾಣೆಯನ್ನು ಭಾಗಶಃ ಸೀಲ್ ಡೌನ್ ಮಾಡಲಾಗಿದೆ.