ಮಂಗಳೂರು, ಜೂ. 29 (DaijiworldNews/SM): ನಗರದ ಲೇಡಿಗೋಶನ್ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜೂ.೩೦ರಿಂದ ಜು.೫ರವರೆಗೆ ಆಸ್ಪತ್ರೆ ಸೀಲ್ಡೌನ್ ಮಾಡಿ ಆದೇಶ ನೀಡಲಾಗಿದೆ.
ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಿಗೆ ಕ್ವಾರೆಂಟೈನ್ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೀಲ್ಡೌನ್ ಮಾಡಿ ಆದೇಶ ನೀಡಲಾಗಿದೆ. ಆ ಮೂಲಕ ಒಳ ಹಾಗೂ ಹೊರರೋಗಿ ದಾಖಲಾತಿಗಳೆರಡೂ ಸ್ಥಗಿತಗೊಳ್ಳಲಿದೆ.
ಇನ್ನು ಸದ್ಯ ದಾಖಲಾದ ರೋಗಿಗಳ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಎಬಿ-ಎಆರ್ಕೆ ಯೋಜನೆಯಡಿ ಪರ್ಯಾಯ ವ್ಯವಸ್ಥೆ ಮಾದಲಾಗಿದೆ. ಇನ್ನು ಆಸ್ಪತ್ರೆ ಸಿಬ್ಬಂದಿಗಳಿಗೆ ಸೋಂಕು ತಗುಲಿರುವುದರಿಂದ ಫ್ಯೂಮಿಗೇಶನ್, ಸ್ಯಾನಿಟೈಸಿಂಗ್ ಮಾಡುವ ಉದ್ದೇಶದಿಂದ ಆಸ್ಪತ್ರೆ ಸೀಲ್ಡೌನ್ ಮಾಡಲಾಗಿದೆ ಎಂದು ಲೇಡಿಗೋಶನ್ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಮಾಹಿತಿ ನೀಡಿದ್ದಾರೆ.