ಉಡುಪಿ, ಜೂ. 29 (DaijiworldNews/SM): ಉಡುಪಿ ಜಿಲ್ಲೆಯ 616 ಕಂಟೈನ್ಮೆಂಟ್ ಪ್ರದೇಶಗಳನ್ನು ಕಂಟೈನ್ ಮೆಂಟ್ ಮುಕ್ತ ವಲಯಗಳಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಘೋಷಿಸಲಾಗಿದ್ದಾರೆ. ಈ ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬಂದ ಕಾರಣದಿಂದ ಈ ಪ್ರದೇಶಗಳನ್ನು ಕಂಟೋನ್ಮೆಂಟ್ ಪ್ರದೇಶಗಳೆಂದು ಗುರುತಿಸಲಾಗಿತ್ತು.
ಈ ಪ್ರದೇಶಗಳು ಕಂಟೋನ್ಮೆಂಟ್ ವಲಯಗಳಾಗಿ 14 ದಿನಗಳು ಪೂರ್ಣಗೊಂಡಿದೆ. ಜೊತೆಗೆ ಈ ಪ್ರದೇಶಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಈ ಕಾರಣದಿಂದ ಇವುಗಳನ್ನು ಡಿನೋಟಿಫೈ ಮಾಡಲಾಗಿದೆ. ಈ ಸೂಚನೆಯು ರಾಜ್ಯ ಮಾರ್ಗಸೂಚಿಗಳನ್ನು ಅನುಸರಿಸಿ ಸಾಮಾನ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡುತ್ತದೆ.
ಡಿನೋಟಿಫೈಡ್ ಪ್ರದೇಶಗಳಲ್ಲಿ ಪೆರ್ಣಂಕಿಲಾ, ಬೆಳಪು, ನಾಡ್ಪಾಲ್, ಇನ್ನಾ, ಹೆರೂರು, ನಲ್ಲುರು, 76-ಬಡಗುಬೆಟ್ಟು, ಯಡ್ತಾರೆ, ಗೋಳಿಹೊಳೆ, ಬಿಜೂರು, ಶಿರ್ವಾ, ನಾಡಾ, ಪುಟ್ಟೂರು, ನಾಡ್ಸಲ್, ನಾವುಂದಾ, ಗಂಗೊಳ್ಳಿ, ಹೆಮ್ಮಾಡಿ, ಶಿರೂರು, ಉಪ್ಪುಂದ ತಗ್ಗಾರ್ಸೆ, ಜಡ್ಕಲ್, ಬೈಂದೂರ್, ವಂಡ್ಸೆ, ಚಿತೂರ್, ನಿಟ್ಟೆ, ಮಿಯಾರ್, ಹಿರ್ಗಾನ್, ಕಣಜಾರ್, ತೆಕ್ಕಟ್ಟೆ, ಬಸ್ರುರು, ಗುಲ್ವಾಡಿ, ಕೋಡಿ, ಉದ್ಯಾವರ, ಮಣಿಪುರ, ಹೆರೂರ್, , ಪಳ್ಳಿ, ವರಂಗ, ಕುಂದಾಪುರ ಟಿಎಂಸಿ, ಕಾರ್ಕಳ ಟಿಎಂಸಿ, ಮತ್ತು ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರ್ ಮತ್ತು ಬ್ರಹ್ಮಾವಾರ ತಾಲೂಕುಗಳ ಇನ್ನಿತರ ಸ್ಥಳಗಳು ಸೇರಿವೆ. ಈ ವಲಯಗಳಲ್ಲಿ ಇನ್ನು ಮುಂದೆ ಸಾಮಾನ್ಯ ಕಾರ್ಯಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.