ಮಂಗಳೂರು, ಜೂ 30(DaijiworldNews/PY) : ಮಂಗಳೂರಿನ ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ರ್ಯಾಂಡಮ್ ಟೆಸ್ಟ್ ಆರಂಭಿಸಲಾಗಿದೆ.
ಮಾಜಿ ಸಚಿವ , ಶಾಸಕ ಯು.ಟಿ.ಖಾದರ್ ಸೂಚನೆ ಹಿನ್ನೆಲೆ, ಉಳ್ಳಾಲ ನಗರಸಭೆಯ ಬಳಿಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ಈ ರ್ಯಾಂಡಮ್ ಟೆಸ್ಟ್ ನಡೆಯುತ್ತಿದ್ದು, ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾಸ್ಥರು ಸೇರಿದಂತೆ ನಾಗರಿಕರಿಗೆ ಟೆಸ್ಟ್ ಮಾಡಲಾಗುತ್ತಿದೆ.
ಉಳ್ಳಾಲ ನಗರಸಭೆ, ಪ್ರಾಥಮಿಕ ಆರೋಗ್ಯ ಕೇಂದ್ರ ಉಳ್ಳಾಲ ವತಿಯಿಂದ ಟೆಸ್ಟ್ ಮಾಡಲಾಗುತ್ತಿದ್ದು, ಉಳ್ಳಾಲ ಹಾಗೂ ಪೆರ್ಮನ್ನೂರು ಗ್ರಾಮ ವ್ಯಾಪ್ತಿಯ ನಾಗರಿಕರಿಗೆ ರ್ಯಾಂಡಮ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ರ್ಯಾಂಡಮ್ ಟೆಸ್ಟ್ ಇಂದು ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಉಳ್ಳಾಲ ಅಜಾದ್ನಗರ ಇಬ್ಬರು ಮಹಿಳೆಯರಿಗೆ ಪಾಸಿಟಿವ್, ಈ ಪೈಕಿ ಓರ್ವ ಮಹಿಳೆ ಮೃತಪಟ್ಟಿದ್ದು ಪ್ರಸಕ್ತ ಅಜಾದ್ನಗರ ಮತ್ತೊಂದು ಮನೆಯಲ್ಲಿ 16 ಪಾಸಿಟಿವ್ ಕೇಸುಗಳು ದೃಢಪಟ್ಟಿತ್ತು.
ಸಮ್ಮರ್ ಸ್ಯಾಂಡ್ 2, ಕೋಡಿ-1, ತಾಜ್ಮಹಲ್-1 ಹಾಗೂ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳಿಗೆ 4 ಪಾಸಿಟಿವ್ ಪತ್ತೆಯಾಗಿದ್ದು, ಈವರೆಗೆ 26 ಕೇಸುಗಳು ಒಂದು ವಾರದಲ್ಲಿ ದೃಢಪಟ್ಟಿದೆ.