ಉಡುಪಿ, ಜೂ 30 (Daijiworld News/MSP): ದೇಶದಲ್ಲೇ ಪ್ರಥಮ ಬಾರಿಗೆ ಡಿಜಿಟಲ್ ಮೂಲಕವಾಗಿ ಗ್ರಾಮೀಣ ಪ್ರದೇಶಕ್ಕೆ ಕಾಂಗ್ರೆಸ್ ಪಕ್ಷ ಕಾರ್ಯಚಟುವಟಿಕೆ ಆರಂಭಿಸುತ್ತಿದೆ. ಎಂದು ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಅವರು " ಕೆಪಿಸಿಸಿ ಹಿರಿಯ ನಾಯಕರು ಸಭೆ ಸೇರಿ ಕೊರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯಾವ ರೀತಿಯ ಕಾರ್ಯಕ್ರಮ ರೂಪಿಸಬೇಕು ಹಾಗೂ ಕೊರೊನಾ ದಿಂದ ಜನ ಸಂಕಷ್ಟಕ್ಕೆ ಒಳಗಾದ ಸಂದರ್ಭವಿದು. ಕೊರೊನಾ ಬರುವ ಮುಂಚೆಯೇ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಕೊರೊನಾದಿಂದಾಗಿ ಆರ್ಥಿಕತೆ ಇನ್ನಷ್ಟು ಕುಸಿದಿದೆ. ಯುಪಿಎ ಸರಕಾರದ ಕಾಲದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಗೆ 2.5 ಲಕ್ಷ ಕೊಟಿ ಸಬ್ಸಿಡಿ ನೀಡುತಿತ್ತು. ಅಂದು ಬ್ಯಾರಲ್ ಗೆ 140 ಡಾಲರ್ ಬೆಲೆ ಇತ್ತು ಈಗ 30 ರಿಂದ 40 ಡಾಲರ್ ಬೆಲೆ ಕಡಿಮೆ ಯಾಗಿದೆ. ಸುಮಾರು 30 ರುಪಾಯಿಗೆ ಪೆಟ್ರೋಲ್ ಅನ್ನು ಈಗ ನೀಡಲು ಸಾಧ್ಯ ಇದ್ದರೂ ಕೂಡಾ ಈಗಿನ ಎನ್ ಡಿ ಎ ಸರಕಾರ ಜನಸಾಮಾನ್ಯರಿಗೆ ಒಂದೇ ತಿಂಗಳಲ್ಲಿ 12 ರುಪಾಯಿ ಏರಿಕೆ ಮಾಡಿದ್ದಾರೆ.
ಕೆಪಿಸಿಸಿ ವತಿಯಿಂದ ನಮ್ಮ ನಾಯಕರ ನೇತೃತ್ವದಲ್ಲಿ ಈ ಕುರಿತಾಗಿ ಪ್ರತಿಭಟನೆ ಆಗಿದೆ. ಭೂ ಮಸೂದೆ ಕಾನೂನಿನ ಅಡಿಯಲ್ಲಿ ಉಭಯ ಜಿಲ್ಲೆಗಳಲ್ಲಿ ಸುಮಾರು 3 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಭೂಮಿ ಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಯುಪಿಎ ಸರಕಾರದ ಕಾಲದಲ್ಲಿ ಒತ್ತುವರಿ ಸಂದರ್ಭದಲ್ಲಿ ಜಾಗದ ಮೌಲ್ಯದ ಮೂರು ಪಟ್ಟು ಪರಿಹಾರವನ್ನು ಕೊಡಲು ಕಾನೂನಿನಲ್ಲಿ ಅವಕಾಶವನ್ನು ಮಾಡಿದ್ದೇವೆ. ಆದರೆ ಎನ್ ಡಿ ಎ ಸರಕಾರ ಇದಕ್ಕೆ ತದ್ವಿರುದ್ದವಾಗಿ ಒತ್ತುವರಿ ಕಾನೂನಿನಲ್ಲಿ ಬದಲಾವಣೆ ಮಾಡಿದೆ. ರೈತರಿಗೆ ಕೊಟ್ಟ ಭೂಮಿಯನ್ನು ವಾಪಾಸ್ ಕಿತ್ತು ಕೊಳ್ಳುವ ಕಾರ್ಯಕ್ರಮಕ್ಕೆ ಈಗಿನ ಬಿಜೆಪಿ ಸರಕಾರ ಚಾಲನೆ ನಿಡಿದೆ. ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ಮುಖಾಂತರ ಬಂಡವಾಳಶಾಹಿಗಳ ದಾಸ್ಯಕ್ಕೆ ರೈತರನ್ನು ಬಲಿ ಮಾಡಿದೆ ಎಂದರು.