ಉಡುಪಿ, ಜೂ 30(DaijiworldNews/PY): ಬೈಂದೂರು ತಾಲೂಕಿನ ವ್ಯಕ್ತಿಯೊಬ್ಬರು ಭಾನುವಾರ ಮೃತರಾಗಿದ್ದು ಅವರಿಗೆ ಕೊರೊನಾ ಇತ್ತು ಎನ್ನುವ ಅಂಶ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದಲ್ಲಿದ್ದ 48 ಪ್ರಾಯದ ವ್ಯಕ್ತಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು ಅಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಶನಿವಾರ ಊರಿಗೆ ಕರೆ ತರಲಾಗಿತ್ತು. ಭಾನುವಾರ ಇವರು ಮೃತ ಪಟ್ಟಿದ್ದರು.
ಭಾನುವಾರ ಆ ವ್ಯಕ್ತಿ ಸಾವನ್ನಪ್ಪುತ್ತಲೇ ಈ ವಿಚಾರವನ್ನು ಇಲಾಖೆಯ ಗಮನಕ್ಕೆ ತರಲಾಗಿತ್ತು. ಮೃತ ವ್ಯಕ್ತಿಯ ಗಂಟಲು ದ್ರವವನ್ನು ಸಂಗ್ರಹಿಸಲಾಗಿತ್ತು. ಮತ್ತು ಕೊರೊನಾ ಶಿಷ್ಟಾಚಾರದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿತ್ತು. ಅದರ ವರದಿ ಕೈ ಸೇರಿದ್ದು ಮೃತ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ. ಮೃತರ ಸಂಪರ್ಕದಲ್ಲಿದ್ದವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.