ಮಂಗಳೂರು, ಜೂ 30(DaijiworldNews/PY): ದ.ಕದಲ್ಲಿ ಮಂಗಳವಾರ 10 ವೈದ್ಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಕೊರೊನಾ ಆಸ್ಪತ್ರೆಯ ಮುಖ್ಯ ವೈದ್ಯರೊಬ್ಬರಿಗೆ ಹಾಗೂ ಕೊರೊನಾ ವಿಭಾಗದ ಮುಖ್ಯಸ್ಥರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.
ಮುಖ್ಯ ವೈದ್ಯರು ಸೇರಿದಂತೆ ಕೊರೊನಾ ಆಸ್ಪತ್ರೆಯ ಹಲವು ವೈದ್ಯರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಈ ಮೂಲಕ ಮಂಗಳವಾರ ದ.ಕ ಜಿಲ್ಲೆಯಲ್ಲಿ 44 ಕೊರೊನ ಪಾಸಿಟಿವ್ ಪತ್ತೆಯಾಗಿದೆ.