ಉಳ್ಳಾಲ, ಜೂ. 30 (DaijiworldNews/SM): ಉಳ್ಳಾಲದಲ್ಲಿ ಮತ್ತಿಬ್ಬರು ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಗೃಹ ರಕ್ಷಕ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇನ್ನು ಉಳ್ಳಾಲದಲ್ಲಿ ಮಂಗಳವಾರದಂದು ಒಟ್ಟು 12 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಈ ಹಿಂದೆ ಉಳ್ಳಾಲದಲ್ಲಿ ನಡೆದ ಮೊದಲ ಕೊರೊನಾ ಮೃತ ಆಝಾದ್ ನಗರದ ಮಹಿಳೆಯ ಮನೆಯ 7 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಉಳ್ಳಾಲ ಸ್ವೀಟ್ಸ್ ಅಂಗಡಿ ಮಾಲೀಕನಲ್ಲೂ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಮಂಜನಾಡಿ ಕಲ್ಕಟ್ಟ ನಿವಾಸಿಯಲ್ಲೂ ಸೋಂಕು ಇರುವುದು ತಿಳಿದು ಬಂದಿದೆ. ಅಲ್ಲದೆ ಖಾಸಗಿ ಲ್ಯಾಬ್ ಒಂದರ ಟೆಕ್ನೀಶಿಯನ್ ಒಬ್ಬರಲ್ಲೂ ಸೋಂಕು ಇರುವುದು ಪತ್ತೆಯಾಗಿದೆ. ಇನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿನ ಸಿಬ್ಬಂದಿಯೊಬ್ಬರಲ್ಲೂ ಸೋಂಕು ಪತ್ತೆಯಾಗಿದೆ.
ಸೋಮವಾರದಂದು 6 ಮಂದಿ ಸಿಬ್ಬಂದಿಗಳಲ್ಲಿ ಕೊರೊನಾ ದೃಢಪಟ್ಟಿತ್ತು. ಆ ಮೂಲಕ ಇದುವರೆಗೆ 13 ಮಂದಿ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟಂತಾಗಿದೆ. ಅಲ್ಲದೆ, ಠಾಣೆಯಲ್ಲಿದ್ದ ಓರ್ವ ಆರೋಪಿಗೂ ಕೊರೊನಾ ದೃಢಪಟ್ಟಿತ್ತು.