ಕಾಸರಗೋಡು, ಜೂ 30 (DaijiworldNews/SM): ಜಿಲ್ಲೆಯಲ್ಲಿ 36 ದಿನಗಳ ಬಳಿಕ ಸಂಪರ್ಕದಿಂದ ಓರ್ವನಿಗೆ ಕೊರೋನ ಪಾಸಿಟಿವ್ ದ್ರಢಪಟ್ಟಿದ್ದು , ಮಂಗಳವಾರ ಜಿಲ್ಲೆಯಲ್ಲಿ ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಮೂವರು ವಿದೇಶ, ಮೂವರು ಹೊರ ರಾಜ್ಯ ಹಾಗೂ ಓರ್ವನಿಗೆ ಸಂಪರ್ಕದಿಂದ ಸೋಂಕು ತಗಲಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮ್ ದಾಸ್ ತಿಳಿಸಿದ್ದಾರೆ.
ವಿದೇಶದಿಂದ ಬಂದ ಕುಂಬಳೆ, ಬದಿಯಡ್ಕ ತಲಾ ಇಬ್ಬರು, ಪನತ್ತಡಿ, ಮಡಿಕೈ, ಚೆಂಗಳ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಕಾಸರಗೋಡು ಜಿಲ್ಲೆಯ ಓರ್ವ ಎರ್ನಾಕುಲಂ ತ್ರಿಪ್ಪಣಿತ್ತರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ಮಂಗಳವಾರ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಚಿಕಿತ್ಸೆಯಲ್ಲಿದ್ದ ಮಂಗಲ್ಪಾಡಿ, ಕುಂಬಳೆ, ಚೆಮ್ನಾಡ್ ನಿವಾಸಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ 6929 ಮಂದಿ ನಿಗಾದಲ್ಲಿದ್ದು, ಈ ಪೈಕಿ 589 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.