ಬಂಟ್ವಾಳ, ಏ 07: ಕೈಯಲ್ಲಿದ್ದ ಮೊಬೈಲ್ ಏಕಾಏಕಿ ಬಿಸಿಯಾಗಿ ಉರಿದು ಬಳಿಕ ಸ್ಫೋಟಗೊಂಡ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಶರೀಕ್ ಎಂಬುವವರ ಮೊಬೈಲ್ ಸ್ಫೋಟವಾಗಿದೆ. ಇವರು ಕಡಿಮೆ ಬೆಲೆಯ ಐವೋಮಿ (iVoomi) ಮೊಬೈಲ್ ಬಳಸುತ್ತಿದ್ದರು. ಮೊಬೈಲ್ ಕೈಯಲ್ಲಿದ್ದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಶರೀಕ್ ಅಪಾಯದಿಂದ ಪಾರಾಗಿದ್ದಾರೆ.
ಕೆಲ ದೇಶಿ ಕಂಪನಿಗಳು ದುಬಾರಿ ಮೊಬೈಲ್ಗಳಲ್ಲಿರುವ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಕಡಿಮೆ ದರಕ್ಕೆ ಒದಗಿಸುತ್ತವೆ. ಆದರೆ ಈ ಮೊಬೈಲ್ ಫೋನ್ ಖರೀದಿಸುವಾಗ ಎಚ್ಚರ ಅಗತ್ಯ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಸಿಕ್ಕಾಪಟ್ಟೆ ಫೀಚರ್ ಇರುವ ಮೊಬೈಲ್ ಬಳಕೆ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಅದರಲ್ಲಿಯೂ ಚೀನಾ ಮೊಬೈಲ್ ಬಳಸುತ್ತಿದ್ದರೆ ತುಸು ಹೆಚ್ಚೇ ಜಾಗೃತರಾಗಿರಬೇಕು.