ಮಂಗಳೂರು, ಜು 01 (Daijiworld News/MSP): ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕಾಸರಗೋಡು ಜಿಲ್ಲಾ ಗಡಿಭಾಗದಿಂದ ಸಂಚರಿಸುವ ನಿವಾಸಿಗಳಿಗೆ, ವೃತ್ತಿಪರರಿಗೆ, ವಿದ್ಯಾರ್ಥಿಗಳಿಗೆ, ಮತ್ತು ಇತರ ಕಾರ್ಮಿಕರಿಗೆ, ದಿನ ನಿತ್ಯದ ಅಂತರ್ ರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ಇ-ಪಾಸ್ ನ್ನು ಸಹಾಯಕ ಆಯುಕ್ತರ ಕಚೇರಿ, ಮಂಗಳೂರು ಉಪವಿಭಾಗ ವಿತರಿಸಿತ್ತು.
ಗಡಿಭಾಗದಿಂದ ವಿವಿಧ ಕಾರಣಗಳಿಗೆ ತಲಪಾಡಿ ಚೆಕ್ಪೋಸ್ಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವವರು ಕಡ್ಡಾಯವಾಗಿ ಇ-ಪಾಸ್ನ್ನು ಹೊಂದಿರಬೇಕು ಎನ್ನುವ ನಿಯಮವಿದೆ.
ಮೊದಲು ನೀಡಲಾಗಿರುವ ಇ-ಪಾಸ್ ಅವಧಿಯು ಜೂನ್ 30 ರಂದು ಮುಕ್ತಾಯಗೊಳ್ಳಲಿರುವುದರಿಂದ ಇ-ಪಾಸ್ ದಿನಾಂಕವನ್ನು ಜುಲೈ 4 ರವರೆಗೆ ವಿಸ್ತರಿಸಲಾಗಿದೆ. ಪಾಸ್ಗಳ ನವೀಕರಣಕ್ಕಾಗಿ ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರ ಪ್ರಕಟಣೆ ತಿಳಿಸಿದೆ.