ಮಂಗಳೂರು, ಜು. 01 (DaijiworldNews/MB) : ರಾಜ್ಯದಲ್ಲಿ ಭಾನುವಾರ ಜುಲೈ 5 ರಿಂದ ಲಾಕ್ಡೌನ್ ಮಾಡಲಾಗಿರುವ ಕಾರಣ ಚರ್ಚ್ಗಳಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆಯನ್ನು ರದ್ದು ಮಾಡಲಾಗಿದೆ ಎಂದು ಮಂಗಳೂರು ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾಲ್ ಸಲ್ಡಾನ್ಹಾ ತಿಳಿಸಿದ್ದಾರೆ.
ಈ ಬಗ್ಗೆ ಸುತ್ತೋಲೆಯಲ್ಲಿ ಮಾಹಿತಿ ನೀಡಿರುವ ಅವರು, ಕರ್ನಾಟಕದಲ್ಲಿ ಜುಲೈ 5 ರಿಂದ ಆಗಸ್ಟ್ 2 ರವರೆಗೆ ಭಾನುವಾರದಂದು ಮತ್ತೆ ಲಾಕ್ ಡೌನ್ ವಿಧಿಸಿದ ಕಾರಣದಿಂದ ಅಗತ್ಯ ಸೇವೆಗಳು ಮತ್ತು ಸರಬರಾಜುಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಯನ್ನು ಅನುಮತಿ ಇಲ್ಲ. ಈ ನಿಟ್ಟಿನಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಹಾಗೆಯೇ ಭಾನುವಾರದ ಸಾಮೂಹಿಕ ಪ್ರಾರ್ಥನೆ ನಡೆಸಲು ಸಾಧ್ಯವಾಗದ ಕಾರಣದಿಂದ ಪಾದ್ರಿಗಳ ಅನುಕೂಲವನ್ನು ಗಣನೆಗೆ ತೆಗೆದುಕೊಂಡು ಶನಿವಾರ ಸಂಜೆ ಒಂದಕ್ಕಿಂತ ಅಧಿಕ ಸಾಮಾಜಿಕ ಪ್ರಾರ್ಥನೆಯ ವ್ಯವಸ್ಥೆ ಮಾಡಬಹುದಾಗಿದೆ.