ಬೈಂದೂರು, ಜು 01 (Daijiworld News/MSP): ಗುರುವಾರದಂದು ಕೆ.ಪಿ.ಸಿ.ಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ ಶಿವಕುಮಾರ್ ಅವರ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನೇರ ಪ್ರಸಾರವಾಗಲಿದ್ದು ಬೈಂದೂರಿನ 45 ಪಂಚಾಯತ್ ವ್ಯಾಪ್ತಿಯಲ್ಲಿ ಡಿಜಿಟಲ್ ಆಪ್ ಮೂಲಕ ನೇರ ಪ್ರಸಾರಗೊಳ್ಳಲಿದೆ.
ಈ ಹಿನ್ನಲೆಯಲ್ಲಿ ಬೈಂದೂರು ಕಾಂಗ್ರೆಸ್ ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದು ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿಯು ಕಾರ್ಯಕ್ರಮವನ್ನು ನೇರ ಪ್ರಸಾರವನ್ನು ವಿಕ್ಷೀಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಸಾಕಷ್ಟು ಮುಂಚಿತವಾಗಿ ಲಾಕ್ ಡೌನ್ ಮಾಡಿದರೂ ಕೂಡ ಕೊರೋನಾ ಹರಡುವಿಕೆ ಜಾಸ್ಥಿಯಾಗುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಕೂಡ ವಿದ್ಯಾರ್ಥಿಗಳ ಸಹಿತ ಸಮುದಾಯಕ್ಕೆ ಕೊರೋನಾ ಸೋಂಕು ಹಬ್ಬುತ್ತಿರುವುದು ನಿಜಕ್ಕೂ ಆತಂಕಕಾರಿ ವಿಚಾರವಾಗಿದೆ. ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಬಂದವರಿಗೆ ಕ್ವಾರೆಂಟೈನ್ ಮಾಡುವಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿದೆ ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.
ಮಹಾರಾಷ್ಟ್ರ, ಹೈದರಬಾದ್, ದುಬೈನಿಂದ ಬಂದವರಿಗೆ ಮೊದಲು ಕೊರೋನಾ ಹರಡುತ್ತಿತ್ತು. ಆದರೆ ಇದೀಗಾ ಸಮುದಾಯಲ್ಲೆ ಸೋಂಕು ಹರಡುತ್ತಿದ್ದು ಜನಸಾಮಾನ್ಯರಿಗೆ ತೊಂದರೆಯಾಗುವ ಲಕ್ಷಣ ಕಾಣುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಸಂಪೂರ್ಣ ತಯಾರಿ ಮಾಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಜನರಿಗೆ ತಿಳಿಹೇಳುವ ಕಾರ್ಯವಾಗಬೇಕು, ರೋಗಿಗಳಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಸರಕಾರದಿಂದ ಆಗಬೇಕು.
ಮುಂದಿನ ದಿನದಲ್ಲಿ ಮತ್ತೆ ಲಾಕ್ ಡೌನ್ ಮಾಡಬೇಕೆನ್ನುವ ವಿಚಾರ ಕೇಳಿಬರುತ್ತಿದ್ದು ಯಾವ ರೀತಿಯಲ್ಲಿ ಮಾಡುತ್ತಾರೆಂಬುದು ತಿಳಿದಿಲ್ಲ. ಆದರೆ ಕೂಲಿ ಕಾರ್ಮಿಕರು, ಆಟೋ ಓಡಿಸುವರು, ಅತೀ ಬಡವರ ಜೀವನ ನಿರ್ವಹಣೆ ಹೇಗೆ ಎಂಬುದು ಸದ್ಯ ಆಲೋಚಿಸಬೇಕಿದ್ದು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರಕಾರ ಕ್ರಮಕೈಗೊಳ್ಳಬೇಕಿದೆ.