ಕೋಟ, ಜು 02 (Daijiworld News/MSP):ಕೋಟದ ಪ್ರಸಿದ್ಧ ಹೋಟೆಲ್ ಮಾಲಿಕನಿಗೆ ಪಾಸಿಟಿವ್ ಬಂದ ಪ್ರಕರಣ ಬುಧವಾರ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಹೋಟೆಲ್ ಮತ್ತು ಅವರು ವಾಸವಾಗಿರುವ ಮನೆಯನ್ನು ಕೋಟ ಕಂದಾಯ ನೀರಿಕ್ಷಕ ರಾಜು ಸೀಲ್ ಡೌನ್ ಗೊಳಿಸಿದರು.ಮಾಲಿಕನನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ.
ಕೋಟ ಆರಕ್ಷ ಠಾಣಾಧಿಕಾರಿ ಸಂತೋಷ್ ಬಿ.ಪಿ,ಗ್ರಾಮ ಲೆಕ್ಕಿಗ ಚಲುವರಾಜು,ಸಹಾಯಕ ರಾಜು ಮರಕಾಲ,ಕೋಟ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭಯಭೀತರಾದ ಸ್ಥಳೀಯರು:
ಕೋಟದ ಪ್ರಸಿದ್ಧ ಹೋಟೆಲ್ ಎಂಬ ಹೆಗ್ಗಳಿಗೆ ಪಾತ್ರವಾದ ಈ ಹೋಟೆಲ್ ಹಲವಾರು ಜನರು ಉಪಹಾರ ಸೇವಿಸಲು ಬರುತ್ತಿದ್ದ ಹಿನ್ನಲೆ ಸ್ಥಳೀಯ ಸಾರ್ವಜನಿಕರು ಭಯಭೀತರಾಗಿದ್ದಾರೆ.