ಉಡುಪಿ, ಜು 02(DaijiworldNews/PY): ಮೀನುಗಾರಿಕೆಗೆಂದು ಹೊರಟಿದ್ದ ದೋಣಿಯೊಂದು ಕಡಲ ಅಲೆಗಳ ಹೊಡೆತಕ್ಕೆ ಮಗುಚಿ ಬಿದ್ದ ಘಟನೆ ಉಪ್ಪುಂದದ ಮಡಿಕಲ್ನಲ್ಲಿ ನಡೆದಿದೆ.
ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದ್ದು, ಆದರೆ, ಮೀನುಗಾರರು ಸಾಂಪ್ರದಾಯಿಕ ನಾಡದೋಣಿಗಳ ಮೂಲಕ ಮೀನುಗಾರಿಕೆ ಮಾಡುತ್ತಾರೆ. ಹಾಗಾಗಿ ದೋಣಿ ಮೀನುಗಾರಿಕೆಗೆಂದು ದಡದಿಂದ ಕಡಲಿಗೆ ಇಳಿದಿದೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ದೋಣಿಯು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದಿದೆ.
ಘಟನೆಯ ಮುನ್ಸೂಚನೆ ತಿಳಿಯುತ್ತಿದ್ದಂತೆ ದೋಣಿಯಲ್ಲಿದ್ದ ಆರು ಮಂದಿ ಸಮುದ್ರಕ್ಕೆ ಹಾರಿ ದಡ ಸೇರಿದ್ದು, ಬಳಿಕ ಮಗುಚಿ ಬಿದ್ದಿದ್ದ ದೋಣೆಯನ್ನು ಮೇಲಕ್ಕೆತ್ತಲಾಯಿತು.