ಉಡುಪಿ, ಏ 08 : ಮತದಾನ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಸಿಡಿಯೊಂದರಲ್ಲಿ ಎಡವಟ್ಟು ಮಾಡಿಕೊಂಡಿದೆ. ಉಡುಪಿಯ ಮಣಿಪಾಲದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿಯ ಯಕ್ಷಗಾನದ ಹಾಡುಗಳುಳ್ಳ ಸಿಡಿ ಬಿಡುಗಡೆಗೊಳಿಸಿತ್ತು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೇತೃತ್ವದಲ್ಲೇ ಈ ಕಾರ್ಯಕ್ರಮ ನಡೆದಿತ್ತು. ಆದ್ರೆ ಮಾಧ್ಯಮ ವರದಿಗಾರರಿಗೆ ಹಂಚಿದ ಸಿಡಿಯೊಂದರಲ್ಲಿ ಮತದಾನ ಜಾಗೃತಿಯ ಯಕ್ಷಗಾನದ ಹಾಡುಗಳ ಬದಲಾಗಿ ಯೂರಿಸ್ ರಿವೆಂಜ್ ಅನ್ನೋ ಗೇಮ್ಸ್ ಪತ್ತೆಯಾಗಿದೆ. ಸದ್ಯ ಇದು ಜಿಲ್ಲಾಡಳಿತ ಚುನಾವಣಾ ವಿಚಾರದಲ್ಲಿ ಅದ್ಯಾವ ಪರಿ ಗಂಭೀರತೆ ತಾಳಿದೆ ಅನ್ನೋದನ್ನು ಸಾಭೀತುಮಾಡಿದೆ. ಅಲ್ಲದೇ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸೋ ಜಿಲ್ಲಾಧಿಕಾರಿ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಅನ್ನೋ ಪ್ರಶ್ನೆ ಕೂಡ ಎದುರಾಗಿದೆ. ಸದ್ಯ ಮಾಧ್ಯಮಗಳಿಗೆ ಹಂಚಿದ ಒಂದು ಸಿಡಿಯಲ್ಲಿ ಈ ಎಡವಟ್ಟು ಕಾಣಸಿಕ್ಕಿದ್ದು, ಇಂತಹ ಇನ್ನೆಷ್ಟು ಸಿಡಿಗಳನ್ನು ಹಂಚಲಾಗಿದೆ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ.