ಬೆಂಗಳೂರು, ಏ 08: ಬೆಂಗಳೂರಿನ ಖಾಸಗಿ ಹೊಟೇಲ್ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರು ಅನ್ನುವ ಪತ್ರಕರ್ತರ ಪ್ರಶ್ನೆಗೆ ನೇರವಾಗಿ ಸಿದ್ದ ರಾಮಯ್ಯ ಅವರತ್ತ ಬೊಟ್ಟು ಮಾಡಿ ತೋರಿಸಿದ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಶ್ನಿಸಿದಾಗ , ರಾಹುಲ್ ಅವರು ಇದು ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ಗೆ ಅವರಿಗೆ ಬಿಟ್ಟ ವಿಚಾರ ಎಂದು ಹೇಳಿ, ಎರಡು ಕ್ಷೇತ್ರದಲ್ಲಿ ಕೂಡ ಸಿಎಂ ಸ್ಪರ್ಧೆಗೆ ಹಸಿರು ನಿಶಾನೆ ನೀಡಿದರು. ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಲಿದ್ದಾರೆ. ಅವರಿಗೆ ಆ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದರು.
ಮುಂದಿನ ಲೋಕಾಸಭೆ ಚುನಾವಣೆ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ರಾಹುಲ್ ಗಾಂಧಿ , ಇದು ಎರಡು ರಾಜಕೀಯ ಪಕ್ಷಗಳ ಹೋರಾಟವಲ್ಲ .ಸೈದಾಂತಿಕ ವಿಚಾರ ನಡುವೆ ನಡೆಯುವ ಹೋರಾಟವಾಗಿರುತ್ತದೆ.ಬೇರೆ ಭಾಗಕ್ಕಿಂತ ಇಲ್ಲಿ ಪ್ರಬುದ್ದ ಮತದಾರಿದ್ದಾರೆ. ಹತ್ತು ವರ್ಷಗಳ ಭವಿಷ್ಯವನ್ನು ಕಾಣುವ ಜನರು ಇಲ್ಲಿದ್ದಾರೆ. ಭವಿಷ್ಯದ ದೃಷ್ಷಿಯಿಂದ ಮತ ಚಲಾಯಿಸುತ್ತಾರೆ. ಹೀಗಾಗಿ ಈ ಚುನಾವಣೆ ನಮಗೆ ಚಾಲೆಂಗಿಂಗ್ ಎಂದು ಇದೇ ವೇಳೆ ತಿಳಿಸಿದರು.