ಮಂಗಳೂರು, ಜು 02 (DaijiworldNews/SM): ಮಂಗಳೂರಿನ ಸುರತ್ಕಲ್ ಬಳಿಯಿರುವ ಪ್ರಸಿದ್ಧ ಸಂಸ್ಥೆಯ 7 ಸಿಆರ್ ಪಿ ಎಫ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಸಂಸ್ಥೆಯ ಹೊರ ಭಗದಲ್ಲಿ ಭದ್ರತಾ ಕಾರ್ಯವನ್ನು ಮಾಡುವ ಸಿಬ್ಬಂದಿಗಳು ಇವರಾಗಿದ್ದಾರೆ. ಈ ಏಳು ಮಂದಿಯಲ್ಲಿ ಸೋಂಕು ಇರುವುದು ಇದೀಗ ದೃಢಪಟ್ಟಿದೆ. ಇನ್ನು ಈ ಸಿಬ್ಬಂದಿಗಳ ಸೋಂಕಿನ ಮೂಲ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ.
ಇದರ ಜೊತೆಗೆ ಇವರ ಸಂಪರ್ಕಕ್ಕೆ ಬಂದಿರುವ ಸುಮಾರು 45 ಮಂದಿಗೆ ಇದೀಗ ಕ್ವಾರಂಟೈನ್ ವಿಧಿಸಲಾಗಿದೆ. ಅಲ್ಲದೆ, ಪಾಸಿಟಿವ್ ಬಂದಿರುವ ಸಿಆರ್ ಪಿ ಎಫ್ ಸಿಬ್ಬಂದಿಗಳ ಮನೆಯವರಿಗೂ ಕ್ವಾರಂಟೈನ್ ವಿಧಿಸಲಾಗಿದೆ.
ಸದ್ಯ ದ.ಕ. ಜಿಲ್ಲೆಯಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ವಿವಿಧ ಆಯಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆಯಾದರೂ, ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಗುರುವಾರದಂದು ಜಿಲ್ಲೆಯಲ್ಲಿ ಓರ್ವ ಶಾಸಕರಲ್ಲೂ ಕೂಡ ಸೋಂಕು ದೃಢಪಟ್ಟಿದೆ.