ಮಂಗಳೂರು, ಏ 08 : ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಮೊದಲ ಬಾರಿಗೆ ಶನಿವಾರ ದಾಖಲೆ ಇಲ್ಲದ ಹಣ ಸಾಗಾಟದ ಘಟನೆ ವರದಿಯಾಗಿದೆ. ಮಂಗಳೂರು ಹಾಗೂ ಬ್ರಹ್ಮಾವರದ ಸಾಸ್ತಾನದ ತಪಾಸಣಾ ಗೇಟ್ ಬಳಿ ಈ ಘಟನೆ ನಡೆದಿದೆ. ಬೆಳ್ತಂಗಡಿಯ ರಾಜಶೇಖರ ಅವರು ತನ್ನ ಕಾರಿನಲ್ಲಿ ಮಂಗಳೂರು ಬರುತ್ತಿದ್ದ ವೇಳೆ ನಗರದ ಪಂಪ್ವೆಲ್ ನಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ತಪಾಸಣೆ ನಡೆಸಿದಾಗ ಕಾರಿನಲ್ಲಿ 2.90 ಲಕ್ಷ ರೂ ಪತ್ತೆಯಾಗಿದ್ದು. ದಾಖಲೆ ಇಲ್ಲದ ಬಗ್ಗೆ ಪ್ರಶ್ನಿಸಿದಾಗ ಬೆಳ್ತಂಗಡಿಯಲ್ಲಿರುವ ಕಾರ್ಮಿಕರಿಗೆ ಸಂಬಳ ನೀಡಲು ಹಣ ಡ್ರಾ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ ಬೆಳ್ತಂಗಡಿಯಲ್ಲಿರುವ ಕಾರ್ಮಿಕರಿಗೆ ಹಣ ನೀಡಲು ಮಂಗಳೂರಿಗೆ ನಗರ ಯಾಕೆ ಹಣ ಒಯ್ಯುತ್ತಿದ್ದರು ಎನ್ನುವ ಸಂದೇಹದ ಮೇಲೆ ಸ್ಪಷ್ಟ ದಾಖಲೆ ನೀಡುವಂತೆ ಸೂಚಿಸಿದ್ದಾರೆ. ಇನ್ನೊಂದೆಡೆ ಬ್ರಹ್ಮಾವರದ ಸಾಸ್ತಾನದ ತಪಾಸಣಾ ಗೇಟ್ ಬಳಿ ದಾಖಲೆ ಇಲ್ಲದ ವಾಹನದಲ್ಲಿ ಹಣ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಂದ 4.5 ಲಕ್ಷ ರೂ ನಗದು ಕುಂದಾಪುರದ ಎಸಿ ಹಾಗೂ ಚುನಾವಣಾಧಿಕಾರಿ ಟಿ.ಭೂಬಾಲನ್ ವಶಕ್ಕೆ ಪಡೆದು ಖಜಾನೆಗೆ ಜಮಾ ಮಾಡಿದ್ದಾರೆ.