ಮಂಗಳೂರು, ಜು 03(DaijiworldNews/PY): ಜಿಲ್ಲಾಧಿಕಾರಿ ಸಿಂಧೂ. ಬಿ. ರೂಪೇಶ್ ಅವರ ನಿರ್ದೇಶನದಲ್ಲಿ ದೈಹಿಕ ವಿಕಲಚೇತನರಾದ ಶರತ್ಗೆ ಸಹಾಯ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಜೂ 25ರಂದು ದಾಯ್ಜಿವಲ್ಡ್ ಈ ಬಗ್ಗೆ ಮಂಗಳೂರಿನ ಹೊರವಲಯದ ಮೋನಮ್ಮ ಅವರ ಮೊಮ್ಮಗ ಶರತ್ ಅವರ ಹೃದಯವಿದ್ರಾವಕ ಕಥೆಯ ಬಗ್ಗೆ ಲೇಖನವೊಂದನ್ನು ಪೋಸ್ಟ್ ಮಾಡಿತ್ತು. ಇದೀಗ ಜಿಲ್ಲಾಡಳಿತ ಇದಕ್ಕೆ ಸ್ಪಂದಿಸಿದ್ದು, ಶರತ್ ಅವರಿಗೆ ಸಹಾಯ ಮಾಡಲು ಮುಂದಾಗಿದೆ.
ಮಂಗಳೂರಿನ ಇಂಡಿಗೊ ಏರ್ಲೈನ್ಸ್ನ ಸ್ಟೇಷನ್ ಮ್ಯಾನೇಜರ್ ಅರ್ಚನಾ ಈ ವಿಷಯವನ್ನು ಹೊರತರುವ ಪ್ರಯತ್ನವನ್ನು ಮಾಡಿದ್ದು, ಅಲ್ಲದೇ, ಜಿಲ್ಲಾಡಳಿತ ಹಾಗೂ ದಾಯ್ಜಿವಲ್ಡ್ ಅನ್ನು ಸಂಪರ್ಕಿಸಿದರು. ಇದರೊಂದಿಗೆ ಅರ್ಚನಾ ಅವರು ಅನೇಕ ಎನ್ಜಿಒ ಹಾಗೂ ಅನಾಥಾಶ್ರಮಗಳನ್ನು ಸಂಪರ್ಕಿಸಿದ್ದಾರೆ.
ಜೂನ್ 29 ರಂದು ಅರ್ಚನಾ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಡಿಸಿ ಜೊತೆ ಸಂಭಾಷಣೆ ನಡೆಸಿದ್ದು, ಶರತ್ ಅವರ ಸ್ಥಿತಿ ಕುರಿತು ಚರ್ಚಿ ನಡೆಸಿದ್ದರು. ಈ ವಿಷಯವನ್ನು ತಿಳಿಸದುಕೊಂಡ ಡಿಸಿ ಸಿಂಧು ಬಿ ರೂಪೇಶ್ ಅವರು ಶರತ್ ಅವರಿಗೆ ಚಿಕಿತ್ಸೆ ಒದಗಿಸಲು ಮುಂದಾದರು. ಹಾಗಾಗಿ, ಜುಲೈ 1ರಂದು ಡಿಸಿ ನೇತೃತ್ವದಲ್ಲಿ ಜಿಲ್ಲಾಡಳಿತ ಶರತ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅಲ್ಲಿ ಶರತ್ ಅವರಿಗೆ ಪ್ರತ್ಯೇಕವಾದ ವಾರ್ಡ್ನಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿತ್ತು.
ಶರತ್ ಅವರಿಗೆ ಸಹಾಯ ಮಾಡಲು ಎನ್ಜಿಒ ಮುಂದಾಗಿದ್ದರೂ ಕೂಡಾ , ಪ್ರಸ್ತುತ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವದ ನೆರವನ್ನು ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ದೈಜಿವರ್ಲ್ಡ್ ಜೊತೆ ಮಾತನಾಡಿದ ಅರ್ಚನಾ ಅವರು, ಶರತ್ ಅವರ ಸ್ಥಿತಿಯ ಬಗ್ಗೆ ನಾನು ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸರಿಯಾದ ಸಮಯದಲ್ಲಿ ನಿರ್ಣಯ ಕೈಗೊಂಡು, ಕಾಳಜಿ ತೋರಿಸಿದ ಜಿಲ್ಲಾಡಳಿತಕ್ಕೆ ನಾನು ಆಭಾರಿಯಾಗಿದ್ದೇನೆ. ಶರತ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲಾಗಿದೆ. ಎನ್ಜಿಒ ಅಧಿಕಾರಿಗಳು ಅವರನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಶರತ್ ಅವರು ಹುಟ್ಟಿನಿಂದಲೇ ದೈಹಿಕವಾಗಿ ವಿಕಲಚೇತನರು. ಕಳೆದ ಎರಡು ವರ್ಷಗಳಿಂದ, ಶರತ್ ಅವರನ್ನು ಅವರ ಅಜ್ಜಿ ಮೋನಮ್ಮ ಅವರು ಆರೈಕೆ ಮಾಡುತ್ತಿದ್ದಾರೆ. ಅವರ ಆದರೆ, ಜೂನ್ನಲ್ಲಿ ಅಜ್ಜಿ ಅನಾರೋಗ್ಯಕ್ಕೆ ಒಳಗಾದಾಗ ಬಳಿಕ ಶರತ್ ಅವರ ಆರೈಕೆ ಮಾಡಲು ಕಷ್ಟವಾಯಿತು ಎಂದರು.
ಮೋನಮ್ಮ ಹಾಗೂ ಶರತ್ ಅವರ ಶೋಚನೀಯ ಪರಿಸ್ಥಿತಿ ಬಗ್ಗೆ ತಿಳಿದ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ಮನೆಗೆ ಭೇಟಿ ನೀಡಿದ್ದು, ಮೋನಮ್ಮ ಅವರ ಸ್ಥಿತಿಯನ್ನು ತಿಳಿದು, ತಮ್ಮ ಸ್ನೇಹಿತರ ಸಹಾಯದಿಂದ ಮೋನಮ್ಮ ಅವರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ಕೊರೊನಾ ಪರೀಕ್ಷೆ ಮಾಡಲಾಯಿತು. ನಂತರ ಅವರನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೋನಮ್ಮ ಅವರು ಆಸ್ಪತ್ರೆಯಲ್ಲಿದ್ದ ಕಾರಣ ಶರತ್ ಅವರ ಆರೈಕೆ ಮಾಡಲು ಯಾರು ಇರಲಿಲ್ಲ. ಈ ಸಂದರ್ಭ ಶರತ್ ಅವರನ್ನು ಆರೈಕೆ ಮಾಡಲು ಮುಸ್ಲಿಂ ಕುಟುಂಬವು ಮುಂದಾಗಿದ್ದು, ಶರತ್ ಅವರ ಮನೆಯನ್ನು ಸ್ವಚ್ಛಗೊಳಿಸಿ, ಶರತ್ ಅವರನ್ನು ಆರೈಕೆ ಮಾಡುತ್ತಿದ್ದರು.