ಬೈಂದೂರು, ಜು. 03 (DaijiworldNews/MSP) : ಬೈಂದೂರು ತಾಲೂಕಿನ ಪಡುವರಿ ಗ್ರಾಮ ಪಂಚಾಯತಿನ ಸಿಬ್ಬಂದಿಯೋರ್ವರಿಗೆ ಕೋವಿಡ್-19 ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸೇರಿ ಪಂಚಾಯತ್ ಸಂಕೀರ್ಣವನ್ನು ಸೀಲ್ಡೌನ್ ಮಾಡಲಾಗಿದೆ.
ಪಡುವರಿ ಗ್ರಾಮ ಪಂಚಾಯತ್ನ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು ಕೋವಿಡ್ ಪರೀಕ್ಷೆ ಮಾಡಿಸಿದಾಗ ಶುಕ್ರವಾರ ವರದಿ ಲಭಿಸಿದ್ದು ಪಾಸಿಟಿವ್ ಬಂದಿದೆ. ಹಾಗಾಗಿ ತಕ್ಷಣ ಪಂಚಾಯತ್ನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪಂಚಾಯತ್ ಸಂಕೀರ್ಣದಲ್ಲಿ ಅಂಚೆ ಕಛೇರಿ, ವಿ.ಎ ಕಛೇರಿ, ಗ್ರಂಥಾಲಯ ಇದೆ. ಎಲ್ಲವನ್ನು ಬಂದ್ ಮಾಡಿ ಸ್ಯಾನಿಟೈಸರ್ ಮಾಡಿಸಲಾಗುತ್ತದೆ. ಪಂಚಾಯತ್ ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಈ ವ್ಯಕ್ತಿಗೆ ಹೇಗೆ ಕೋವಿಡ್ ಬಂತು ಎನ್ನುವುದು ನಿಗೂಢವಾಗಿದೆ. ಸಂಪರ್ಕದ ಮೂಲವನ್ನು ಪತೆ ಹಚ್ಚಲಾಗುತ್ತಿದೆ.