ಉಳ್ಳಾಲ, ಜು 03 (DaijiworldNews/SM): ಉಳ್ಳಾಲ ವ್ಯಾಪ್ತಿಯ ಸಿಸಿಬಿ ಪೊಲೀಸ್, ಉಳ್ಳಾಲ ನಗರಸಭೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ,ಬಿಜೆಪಿ ಮುಖಂಡ ಹಾಗೂ ಉಳ್ಳಾಲ ನಗರಸಭೆ ಕಾವಲುಗಾರ ಸೇರಿದಂತೆ ಒಟ್ಟು 38 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಇದರಲ್ಲಿ ಉಳ್ಳಾಲದಲ್ಲಿ ನಡೆದ ರ್ಯಾಂಡಮ್ ಪರೀಕ್ಷೆಗೆ ಒಳಪಟ್ಟ 28 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಜೂ.23 ರಿಂದ 10 ದಿನಗಳವರೆಗೆ ಉಳ್ಳಾಲದಲ್ಲಿ 109 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಮುಕ್ಕಚ್ಚೇರಿಯ 36 ರ ಮಹಿಳೆ, ಆಜಾದ್ ನಗರ 5ರ ಮಗು, ಪಿಲಾರು ದಾರಂದಬಾಗಿಲು ಕುಚ್ಚುಗುಡ್ಡೆ 28 ರ ಯುವಕ, 66 ಅಜಾದ್ ನಗರದ ಗಂಡಸು , ತೊಕ್ಕೊಟ್ಟು ಹೊಸಗದ್ದೆ 45ರ ಸಿಸಿಬಿ ಪೊಲೀಸ್ , ಉಳ್ಳಾಲ ಕೋಡಿ ನಿವಾಸಿ 28 ಗಂಡಸು, 27 ಮಹಿಳೆ, 28 ಮಹಿಳೆ, 23 ಗಂಡಸು( ಪ್ರಾಥಮಿಕ ಸಂಪರ್ಕ), ಮುಕ್ಕಚ್ಚೇರಿ 44 ಗಂಡಸು , ತೊಕ್ಕೊಟ್ಟು ಸ್ಮಾರ್ಟ್ ಸಿಟಿ 62 ಗಂಡಸು, ಸೋಮೇಶ್ವರ ಅಂಬಿಕಾರೋಡ್ 30 ರ ಮಹಿಳೆ , ಉಳ್ಳಾಲ ಸುಭಾಷನಗರ 43 ರ ಗಂಡಸು, ಬಸ್ತಿಪಡ್ಪು 52ರ ಇಬ್ಬರು ಪುರುಷರು, ಉಳ್ಳಾಲ ನಗರಸಭೆಯ ಕಾವಲುಗಾರ 35 ರ ಪುರುಷ, ಭಗವತಿನಗರ 40ರ ಗಂಡಸು, ಮೊಗವೀರಪಟ್ನ 50 ರ ಗಂಡಸು, ಉಳ್ಳಾಲ ಕೋಡಿ ನಿವಾಸಿ 27ರ ಯುವಕ( ಪ್ರಾಥಮಿಕ ಸಂಪರ್ಕ), ಕೋಡಿ ಕೋಟೆಪುರ 40 ಗಂಡಸು , ಪೂಜಾರಿಬೈಲು ನಿವಾಸಿ ಉಳ್ಳಾಲ ನಗರಸಭೆ ಸದಸ್ಯ 47 ಗಂಡಸು , ಮುನ್ನೂರು ಸಂತೋಷನಗರ 27 ರ ಯುವಕ , ಕೋಡಿ 33ರ ಗಂಡಸು ( ಪ್ರಾಥಮಿಕ ಸಂಪರ್ಕ), ಅಜಾದ್ ನಗರ 40 ರ ಗಂಡಸು , ನಗರಸಭೆ ಮಾಜಿ ಅಧ್ಯಕ್ಷ ಪಿಲಾರು ಪೆರ್ಮನ್ನೂರು ನಿವಾಸಿ 69 ಗಂಡಸು, ಮಾಡೂರು 32 ರ ಗಂಡಸು , ತೊಕ್ಕೊಟ್ಟು ಸ್ಮಾರ್ಟ್ಸಿಟಿ 9 ಸಿಟಿ 47 ರ ಗಂಡಸು, ಮೊಗವೀರಪಟ್ನದ ಬಿಜೆಪಿ ಮುಖಂಡ 51 ಗಂಡಸು, ಮುಕ್ಕಚ್ಚೇರಿ 74 ರ ಗಂಡಸು , ಆಜಾದನಗರ 38ರ ಗಂಡಸು , ಕೋಡಿ 35 ಮಹಿಳೆ (ಪ್ರಾಥಮಿಕ ಸಂಪರ್ಕ), ಬಂಡಿಕೊಟ್ಯ 32 ಮಹಿಳೆ , ಅಳೇಕಲ ಉಳ್ಳಾಲ 58ರ ಗಂಡಸು , ಒಂಭತ್ತುಕೆರೆ 42 , 45 ಗಂಡಸು, ಟಿಪ್ಪುಸುಲ್ತಾನ್ ಕಾಲೇಜ್ ಬಳಿಯ 58ರ ಗಂಡಸು, ಧರ್ಮನಗರ 23ರ ಯುವಕ, ತೊಕ್ಕೊಟ್ಟು ಕ್ರಾಸ್ ರೋಡ್ 45 ಗಂಡಸು ಇವರಲ್ಲಿ ಕೊರೊನಾ ಪತ್ತೆಯಾಗಿದೆ.
ರ್ಯಾಂಡಂ ಪರೀಕ್ಷೆ ಮಾಡದೇ ಇದ್ದಲ್ಲಿ ಡೆತ್ ರೇಟ್ ಜಾಸ್ತಿಯಾಗಬಹುದು : ಯು.ಟಿ ಖಾದರ್
ಉಳ್ಳಾಲ ಭಾಗದಲ್ಲಿ 400 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. 85 ರಷ್ಟು ಪಾಸಿಟಿವ್ ಸಾಧ್ಯತೆಯಿವೆ. ಕುಟುಂಬಸ್ಥರಿಗೆ ಹರಡದಂತೆ ಜಾಗೃತಿ ಹಾಗೂ ವೈರಸ್ ಕುರಿತು ಜಾಗೃತಿ ಮಾಡಿಸುವ ಉದ್ದೇಶದಿಂದ ಕ್ರಮಕೈಗೊಳ್ಳಲಾಗಿದೆ. ಪಾಸಿಟಿವ್ ಬಂದವರು ಗಾಬರಿ ಪಡದಿರಿ. 10 ದಿನಗಳ ಕಾಲ ಅಂತರ ಕಾಪಾಡಿಕೊಂಡು ಇದ್ದಲ್ಲಿ ಗುಣಮುಖರಾಗುತ್ತಾರೆ. ರ್ಯಾಂಡಂ ಚೆಕ್ ಮಾಡದೇ ಇದ್ದ ಪ್ರದೇಶಗಳಲ್ಲಿ ಡೆತ್ ರೇಟ್ ಜಾಸ್ತಿಯಾಗುವ ಸಾಧ್ಯತೆ ಇದೆ. ಔಟ್ ಬ್ರೇಕ್ ತಪ್ಪಿಸುವ ಸಲುವಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಧರ್ಮೀಯರು, ವರ್ತಕರು, ರಿಕ್ಷಾ ಚಾಲಕರು ಸ್ವಯಂ ಪ್ರೇರಿತ ಬಂದ್ ನಡೆಸುವುದರ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲ ಜನಜಾಗೃತಿಯ ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.