ಕಾಸರಗೋಡು, ಏ 09 : ವಿವಾಹದ ಮನೆಯಲ್ಲಿ ಬಸ್ಸಿನಡಿಗೆ ಸಿಲುಕಿ ಏಳು ವರ್ಷದ ಬಾಲಕಿ ಮೃತಪಟ್ಟ ದಾರುಣ ಘಟನೆ ಏ 8 ರ ಭಾನುವಾರ ಸಂಜೆ ಕಾಞ೦ಗಾಡ್ ಬಲ್ಲ ಕಡಪ್ಪುರದಲ್ಲಿ ನಡೆದಿದೆ.
ಮಾಣಿಕ್ಕೋತ್ ಕೊಳವಯಲ್ ನ ಗಲ್ಫ್ ಉದ್ಯೋಗಿ ಖಾಲಿದ್ ದಂಪತಿ ಪುತ್ರ ನಸೀರಾ ಮೃತಪಟ್ಟ ಬಾಲಕಿ. ಆದಿತ್ಯವಾರ ಸಂಜೆ ಐದು ಗಂಟೆಗೆ ಬಲ್ಲ ಕಡಪ್ಪುರದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ನಡೆದ ವಿವಾಹಕ್ಕೆ ತಾಯಿ ಜೊತೆ ತೆರಳಿದ್ದರು.
ವಿವಾಹ ಮನೆಯಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಬಸ್ ರಿವರ್ಸ್ ತೆಗೆಯುತ್ತಿದ್ದಾಗ ನಸೀರಾ ಬಸ್ಸಿನಡಿಗೆ ಸಿಲುಕಿದ್ದು , ಗಂಭೀರ ಗಾಯಗೊಂಡ ಬಾಲಕಿಯನ್ನು ಕೂಡಲೇ ಕಾಞ೦ಗಾಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಳು. ನಸೀರಾ ಕಾಞ ೦ಗಾಡ್ ಲಿಟ್ಲ್ ಫ್ಲವರ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.