ಮಂಗಳೂರು, ಜು 04 (DaijiworldNews/PY): ದ.ಕ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಹಿನ್ನಲೆ ವ್ಯವಹಾರ ಸ್ಥಗಿತಗೊಳಿಸಲು ನಾಳೆಯಿಂದ ಐದು ದಿನಗಳ ಕಾಲ ಜಿಲ್ಲೆಯ ಜ್ಯುವೆಲ್ಲರಿಗಳನ್ನು ಬಂದ್ ಮಾಡಲು ದ.ಕ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘ ನಿರ್ಧರಿಸಿವೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜ್ಯುವೆಲ್ಲರಿಗಳು ಜುಲೈ 5 ರಿಂದ ಜುಲೈ 9ರವರೆಗೆ ಬಂದ್ ಮಾಡಲು ತೀರ್ಮಾನ ಮಾಡಿವೆ.
ಕಾರ್ಪೊರೇಟ್ ಸ್ವರ್ಣಾಭರಣ ಮಳಿಗೆ ಸೇರಿ ಎಲ್ಲವೂ ಬಂದ್ ಆಗಲಿದ್ದು, ಇನ್ನು ಚಿನ್ನಾಭರಣ ಕಾಯ್ದಿರಿಸಿದವರು ಇಂದು (ಶನಿವಾರ) ಮಳಿಗೆಗೆ ಆಗಮಿಸಲು ಸೂಚನೆ ನೀಡಲಾಗಿದೆ.