ಮುಂಬಯಿ, ಜು. 04 (DaijiworldNews/SB) ವಿಶ್ವವೇ ಕಣ್ಣಿಗೆ ಕಾಣದ, ಅಸಡ್ಡೆ ತೋರಿಸಿದರೆ ಜೀವವನ್ನೇ ಬಲಿಪಡೆಯುವ ಕೋವಿಡ್-19 ಎಂಬ ವೈರಸಿನ ಪ್ರಸರಣಕ್ಕೆ ತತ್ತರಿಸಿ ಹೋಗಿದೆ. ಓರ್ವ ಕೋವಿಡ್ ಸೋಂಕಿತ 1.5 ರಿಂದ 3.5 ಜನರಿಗೆ ವೈರಸ್ ಹರಡಬಹುದು. ಆದುದರಿಂದ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶುಚಿ ಹಾಗೂ ಸೋಂಕು ಮುಕ್ತ ವಸ್ತುಗಳೊಂದಿಗೆ ಜೀವಿಸುವುದು ಅತೀ ಅಗತ್ಯ. ಕೋವಿಡ್ ವೈರಸ್ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಜಗತ್ತು ತನ್ನ ರಕ್ಷಣೆಗಾಗಿ ಈಗಾಗಲೇ ಹಲಾವಾರು ದಾರಿಗಳನ್ನು ಕಂಡುಕೊಳ್ಳುವಲ್ಲಿ ಸತತ ಪ್ರಯತ್ನಗಳನ್ನು ಮಾಡುತ್ತಿದೆ.
ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ ಮನುಷ್ಯನ ಕೈಗಳೊಂದಿಗೆ ಆತನಿಂದ ಮುಟ್ಟಲ್ಪಡುವ ಹಾಗೂ ಆತನ ಸಂಪರ್ಕಕ್ಕೆ ಬರುವ ಪ್ರತಿಯೊಂದು ವಸ್ತುವನ್ನು ಸ್ಯಾನಿಟೈಸ್ ಮಾಡಬೇಕಾಗಿದೆ. ಕೈಗಳ ಸ್ಯಾನಿಟೈಸೇಶನ್ ಮಾಡುವ ಸ್ಯಾನಿಟೈಸರ್ ಗಳು ಮಾರುಕಟ್ಟೆಯಲ್ಲಿ ಯಥೇಶ್ಟ ಲಭ್ಯವಿವೆ. ಆದರೆ ವಸ್ತುಗಳನ್ನು ರೋಗಾಣುಮುಕ್ತ ಮಾಡುವ ಪದಾರ್ಥಗಳು ಮಾರುಕಟ್ಟೆಯಲ್ಲಿ ಬಹಳ ವಿರಳ. ಈ ನ್ಯೂನತೆಯನ್ನು ನಿಭಾಯಿಸಲು ಡಿಎನ್ ವಿ ಗ್ರೂಪ್ ಇದೀಗ ಪ್ಯೂರೊ ಸಾನ್ ಸ್ಪ್ರೇ ಮತ್ತು ಪ್ಯೂರೊ ವೆಜ್ಜಿ ವಾಶ್ ಎರಡು ಹೊಸ ಸ್ಯಾನಿಟೈಸರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪ್ಯೂರೊ ಸಾನ್ ಸ್ಪ್ರೇ ( ಬ್ರಾಡ್ ಸ್ಪೆಕ್ಟ್ರಮ್ ಕ್ಲೀನರ್)
ಜನರು ದಿನಂಪ್ರತಿ ಕೈಯಾಡಿಸುವ ಡೋರ್ ಬೆಲ್ಸ್,ಪೀಟೋಪಕರಣಗಳು, ಸ್ವಿಚ್ ಬೋರ್ಡ್ ಗಳು, ಟಾಯ್ಲೆಟ್ ಸೀಟುಗಳು, ಕಿಟಕಿ ಬಾಗಿಲುಗಳು, ರೆಫ್ರೀಜರೇಟರ್, ರಿಮೋಟ್ ಕಂಟ್ರೋಲ್, ಹಾಗೂ ಇನ್ನಿತರ ಮನೆ, ಅಂಗಡಿ, ಕಛೇರಿ ವಸ್ತುಗಳನ್ನು ಸೋಂಕು ಮುಕ್ತಗೊಳಿಸಲು ಪುರೋ ಸಾನ್ ಸ್ಪ್ರೇಯನ್ನು ಬಳಸಬಹುದಾಗಿದೆ.ನೆಲದ ಹಾಗೂ ಇನ್ನಿತರ ವಸ್ತುಗಳ ಪದರದ ಮೇಲೆ ನೇರವಾಗಿ ಪುರೋ ಸಾನ್ ಸ್ಪ್ರೇ ಸಿಂಪಡಿಸಬಹುದಾಗಿದೆ
ಪ್ಯೂರೊ ವೆಜ್ಜಿ ವಾಶ್
ಮಾರುಕಟ್ಟೆಯಿಂದ ತರುವ ತರಕಾರಿ, ಹಣ್ಣುಹಂಪಲು, ಮಾಂಸ, ಮೀನು ಹಾಗೂ ಇನ್ನಿತರ ಬೇಯಿಸದ ಅಹಾರ ವಸ್ತುಗಳ ಮೇಲೆ ಪ್ಯೂರೊ ವೆಜ್ಜಿ ವಾಶ್ ಬಳಸಬಹುದಾಗಿದೆ. ವಿಶ್ಲೇಷಕರ ಪ್ರಕಾರ ನಾಲ್ಕು ಗಂಟೆಗಳ ವರೆಗೆ ಹಣ್ಣುಹಂಪಲು ಹಾಗೂ ತರಕಾರಿಗಳ ಮೇಲೆ ವೈರಸ್ ತನ್ನ ಜೀವಂತ ಇರಲು ಸಾಧ್ಯವಿದೆ. ಪ್ಯೂರೊ ವೆಜ್ಜಿ ವಾಶ್ ನಿಂದ ಹಣ್ಣುಹಂಪಲು ಹಾಗೂ ತರಕಾರಿಗಳನ್ನು ತೊಳೆದರೆ ವೈರಸ್ ಹಾಗೂ ಇತರ ಅಣುಗಳು ಸಾಯುತ್ತವೆ. ಇದರಿಂದ ವೈರಾಣುಗಳು ಮನುಷ್ಯನ ದೇಹದ ಒಳಗೆ ಹೋಗುವುದನ್ನು ತಡೆಗಟ್ಟಬಹುದಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಖರೀದಿಗಾಗಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.
Nimra Anvis (Managing partner)
DVN Group, Mumbai
Mail: Info@dvngroups.in
SSS Trading Company (Karnataka distributor)
Ph: 9845047869