ಮಂಗಳೂರು, ಜು 04 (DaijiworldNews/PY): ಆ್ಯಂಬುಲೆನ್ಸ್ ನಲ್ಲಿ ಅರ್ಧ ಗಂಟೆ ಕಾದು ಕೂತಿದ್ದ ಕೊರೊನಾ ಸೋಂಕಿತ ಓರ್ವನನ್ನು ಆಸ್ಪತ್ರೆಗೆ ಹೋಗಲು ಶಾಸಕ ಯು ಟಿ ಖಾದರ್ ಅವರು ವ್ಯವಸ್ಥೆ ಮಾಡಿಕೊಟ್ಟಿದ್ದು ಮಾನವೀಯತೆ ಮೆರೆದಿದ್ದಾರೆ.
ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಘಟನೆ ನಡೆದಿದೆ. 27 ರ ಹರೆಯದ ಯುವಕನನ್ನ ಕರೆ ತಂದಿದ್ದ ಆ್ಯಂಬುಲೆನ್ಸ್
ಆರೋಗ್ಯ ಇಲಾಖೆಯ ವೈಫಲ್ಯದಿಂದ ಆಸ್ಪತ್ರೆಗೆ ಪ್ರವೇಶ ಮಾಡಲು ಅವಕಾಶವಿಲ್ಲದ ಕಾರಣ ಸೋಂಕಿತ ಯುವಕ ಆ್ಯಂಬುಲೆನ್ಸ್ ನಲ್ಲಿ ಅರ್ಧ ಗಂಟೆ ಕಾದು ಕೂತಿದ್ದ.
ಈ ಸಂದರ್ಭ ನೆರೆಯ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭ ಇದನ್ನು ಗಮನಿಸಿದ ಶಾಸಕರು ತಕ್ಷಣ ವಾಹನ ನಿಲ್ಲಿಸಿ ಆಸ್ಪತ್ರೆಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.
ಜಿಲ್ಲಾಡಳಿತದ ಅವಕಾಶ ಅನುಮತಿ ಇರದ ಕಾರಣ ಆಸ್ಪತ್ರೆಯ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಈ ವೇಳೆ ಶಾಸಕ ಯು ಟಿ ಖಾದರ್ ಅವರು ವ್ಯವಸ್ಥೆ ಕಲ್ಪಿಸಿದ್ದು ಕೊನೆಗೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.