ಮಂಗಳೂರು, ಜು. 04 (DaijiworldNews/MB) : ಉದ್ಯೋಗಸ್ಥರು, ವಿದ್ಯಾರ್ಥಿಗಳಿಗೆ ಕಾಸರಗೋಡಿನಿಂದ ಮಂಗಳೂರಿಗೆ ತಲಪಾಡಿ ಚೆಕ್ಪೋಸ್ಟ್ ಮೂಲಕ ಪ್ರವೇಶಿಸಲು ನೀಡಲಾಗಿರುವ ಇ ಪಾಸ್ನ ಅವಧಿಯನ್ನು ಜುಲೈ 11 ರವರೆಗೆ ವಿಸ್ತರಣೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ
ಜೂನ್ 30 ರಂದು ಈ ಪಾಸ್ನ ಅವಧಿ ಮುಕ್ತಾಯವಾಗಿದ್ದು ಜುಲೈ 4 ರವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಎಲ್ಲಾ ಪಾಸ್ಗಳ ಅವಧಿಯನ್ನು ಜುಲೈ 11 ರವರೆಗೆ ವಿಸ್ತರಿಸಲಾಗಿದೆ.