ಮಂಗಳೂರು, ಜು 05 (DaijiworldNews/PY): ನೇತ್ರಾವತಿ ಸೇತುವೆಯ ಮೇಲೆ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ದೊರೆತಿದೆ.


ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಕಾಫಿ ಡೇ ಮಾಲಕ ಸಿದ್ದಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರದ ದಿನಗಳಲ್ಲಿ ಈ ಸೇತುವೆಯಲ್ಲಿ ಆತ್ಮಹತ್ಯೆಗಳ ಪ್ರಕರಣ ಜಾಸ್ತಿಯಾಗುತ್ತಿತ್ತು. ಅಲ್ಲದೇ ಈ ಸೇತುವೆಯನ್ನು ಸುಸೈಡ್ ಸ್ಪಾಟ್ ಎಂದು ಕರೆಯಲಾಗುತ್ತಿತ್ತು. ಈ ಎಲ್ಲಾ ಘಟನೆಗಳ ಹಿನ್ನೆಲೆ ಬಹಳ ಹಿಂದೆ ನೇತ್ರಾವತಿ ಸೇತುವೆಗೆ ಫೆನ್ಸಿಂಗ್ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಇತ್ತು.