ಉಡುಪಿ, ಜು. 05 (DaijiworldNews/MB) : ಭಾನುವಾರದ ಲಾಕ್ಡೌನ್ ವಿಧಿಸಿದ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಉಡುಪಿಯಲ್ಲಿ ಬೆಂಬಲ ದೊರೆತಿದ್ದು ಜಿಲ್ಲೆಯೇ ಸ್ತಬ್ಧವಾಗಿದೆ.















ಎಲ್ಲಾ ಅಂಗಡಿಗಳು ಮತ್ತು ಹೊಟೇಲ್, ರೆಸ್ಟೋರೆಂಟ್ಗಳು ಮುಚ್ಚಲಾಯಿದ್ದು ರೇಷನ್ ಮತ್ತು ವೃತ್ತಪತ್ರಿಕೆ ಅಂಗಡಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ.
ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿರ್ವಾಹಕರು ಕೂಡಾ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದರು. ರಸ್ತೆಗಳು ನಿರ್ಜನವಾಗಿದ್ದು ಬೆರಳೆಣಿಕೆಯ ಮಂದಿ ಮಾತ್ರ ಸಂಚಾರ ಮಾಡುತ್ತಿದ್ದಾರೆ.
ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು ಪ್ರತಿಯೊಂದು ವಾಹನವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಹಾಗೆಯೇ ಅನಗತ್ಯವಾಗಿ ಓಡಾಟ ನಡೆಸುವವರ ವಾಹನವನ್ನು ವಶಕ್ಕೆ ಪಡೆಯಲು ಹಾಗೂ ದಂಡ ವಿಧಿಸಲು ಪೊಲೀಸರಿಗೆ ಆದೇಶ ನೀಡಲಾಗಿದೆ.