ಮಂಗಳೂರು, ಜು. 05 (DaijiworldNews/MB) : ಮಂಗಳೂರಿನ ಕೈಕಂಬ ಬಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಮೂರು ಮನೆಗಳಿಗೆ ಸಂಪೂರ್ಣವಾಗಿ ಹಾನಿ ಉಂಟಾದರೆ ಹಲವು ಮನೆಗಳು ಅಪಾಯದಲ್ಲಿದೆ.


ಮುಂಜಾನೆಯಿಂದ ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು ಮಣ್ಣಿನ ಅಡಿಯಲ್ಲಿ ಮಕ್ಕಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳನ್ನು ರಕ್ಷಣೆ ಮಾಡುವ ಕಾರ್ಯಚರಣೆ ನಡೆಯುತ್ತಿದೆ.
ಸುಮಾರು 200 ರಿಂದ 250 ರಷ್ಟು ಮಂದಿ ಅಲ್ಲಿ ಸ್ಥಳದಲ್ಲಿ ಸೇರಿದ್ದು ಸಾರ್ವಜನಿಕರು ಸ್ಥಳಕ್ಕೆ ಬರದಂತೆ ಪೊಲೀಸರು ತೆರಳಿ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಅಲ್ಲಿ ವಾಸವಿರುವವರನ್ನು ಸ್ಥಳಾಂತರ ಮಾಡುವಂತಹ ಕ್ರಮವನ್ನು ಕೂಡಾ ಕೈಗೊಳ್ಳಲಾಗಿದೆ.