ಉಳ್ಳಾಲ, ಜು. 05 (DaijiworldNews/MB) : ಉಳ್ಳಾಲದಾದ್ಯಂತ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ವಾಹನಗಳು ಮಾತ್ರ ಸಂಚರಿಸುತ್ತಿದ್ದರೆ, ಬೇಕಾಬಿಟ್ಟಿ ತಿರುಗುವ ವಾಹನಗಳನ್ನು ಗಸ್ತು ನಿರತ ಪೊಲೀಸರು ವಾಪಸ್ಸು ಕಳುಹಿಸಿದರು.








ತೊಕ್ಕೊಟ್ಟು, ಕುತ್ತಾರು, ಉಳ್ಳಾಲ, ಕೋಟೆಕಾರು, ಬೀರಿ, ತಲಪಾಡಿ, ದೇರಳಕಟ್ಟೆ , ಮುಡಿಪು, ಕೊಣಾಜೆ, ಅಸೈಗೋಳಿ ಭಾಗಗಳಲ್ಲಿ ಪೊಲೀಸರು ಚೆಕ್ ಪಾಯಿಂಟ್ ಇರಿಸಿದ್ದಾರೆ. ಆಸ್ಪತ್ರೆ, ಹಾಲು, ಪತ್ರಿಕಾ ವಾಹನಗಳನ್ನು ಹೊರತುಪಡಿಸಿ ಅಗತ್ಯ ಕಾರ್ಯದ ನಿಮಿತ್ತ ತೆರಳುವ ವಾಹನಗಳನ್ನು ಬಿಟ್ಟರೆ, ಸುಖಾಸುಮ್ಮನೆ ತಿರುಗುವ ಮಂದಿಯನ್ನು ತಡೆದು ವಾಪಸ್ಸು ಕಳುಹಿಸಿದರು.
ಗಡಿಭಾಗ ತಲಪಾಡಿಯಲ್ಲಿ ವಾಹನಗಳು ಇಲ್ಲದೇ ದಿನನಿತ್ಯ ಪಾಸ್ ಪರಿಶೀಲನೆಯಲ್ಲಿ ವ್ಯಸ್ತಯಾಗಿದ್ದ ಪೊಲೀಸರು ನಿರಾಳರಾಗಿದ್ದರು. ಉಳ್ಳಾಲ ಜಂಕ್ಷನ್ ನಲ್ಲಿ ಕೆಲವರು ಮೀನು ಮಾರಾಟ ನಡೆಸುತ್ತಿದ್ದರೆ, ಇನ್ನು ಹಲವರು ಪೊಲೀಸರ ಕಣ್ತಪ್ಪಿಸಿ ಮಾಸ್ಕ್ ಧರಿಸದೇ ಓಡಾಡುವ ದೃಶ್ಯಗಳು ಕಂಡುಬಂತು. ಬಸ್ಸುಗಳ ಓಡಾಟವೂ ಇರದೆ ರಸ್ತೆಗಳೆಲ್ಲಾ ಬಿಕೋ ಅನ್ನುತಿತ್ತು.