ಮಂಗಳೂರು, ಜು 05 (DaijiworldNews/PY): ಜಿಲ್ಲೆಯ ಮಾಜಿ ಕೇಂದ್ರ ಸಚಿವರೊಬ್ಬರಿಗೆ ಕೊರೊನಾ ದೃಢವಾಗಿದೆ.

ಗಂಟಲ ದ್ರವದ ಮಾದರಿಯ ಪರೀಕ್ಷೆಯಲ್ಲಿ ಮಾಜಿ ಸಚಿವ ಹಾಗೂ ಅವರ ಪತ್ನಿಗೂ ಕೂಡಾ ಸೋಂಕು ಇರುವುದು ಪತ್ತೆಯಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಸಚಿವರಿಗೆ ಸೋಂಕು ದೃಢವಾಗಿದ್ದರೂ, ಸೋಂಕು ಸಂಬಂಧಿಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ, ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.